ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಲಾಕ್ ಡೌನ್ ಘೋಷಿಸಲಾಗಿದ್ದರೂ ಕೂಡ ಕಲಬುರಗಿಯ ಗ್ರಾಮವೊಂದರ ಜನರು ಜಾತ್ರೆ ಮಾಡಿ ರಥೋತ್ಸವ ನೆರವೇರಿಸಿರುವ ಘಟನೆ ನಡೆದಿದೆ.
ಹೌದು. ಕಲಬುರಗಿಯ ರಾವೂರ ಗ್ರಾಮಸ್ಥರು ಕೊರೊನ ಭೀತಿ ನಡುವೆಯೂ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ರಥೋತ್ಸವ ನೆರವೇರಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಗ್ರಾಮಸ್ಥರು ರಾಥೋತ್ಸವ ಮಾಡುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ ಜಿಲ್ಲಾಡಳಿತದ ಹಾಗೂ ಪೊಲೀಸರ ಅನುಮತಿಯಿಲ್ಲದೇ ಇಂದು ಮುಂಜಾನೆ 6 ಗಂಟೆಗೆ ರಥೋತ್ಸವ ನಡೆಸಿದ್ದಾರೆ. ರಥೋತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ಇದೇ ರಾವೂರು ಗ್ರಾಮದ ಮೂರು ಕೀ.ಮಿ ದೂರದಲ್ಲಿರುವ ವಾಡಿ ಗ್ರಾಮದಲ್ಲಿ 2 ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ಭೀತಿ ಇದ್ದಾಗ್ಯೂ ಗ್ರಾಮಸ್ಥರು ರಥೋತ್ಸವ ಮಡಿ ಬೇಜವಾಬ್ದಾರಿ ಮೆರೆದಿದ್ದಾರೆ. ಕಲಬುರಗಿಯಲ್ಲಿ ಈಗಗಾಲೇ ಕೊರೊನಾ ಮಹಾಮಾರಿ ಮೂವರನ್ನು ಬಲಿಪಡೆದಿದ್ದು, ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ