
6 ಜನರು ಅರೆಸ್ಟ್
ಪ್ರಗತಿವಾಹಿನಿ ಸುದ್ದಿ: ಕೆಲಸದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಕಾರ್ಮಿಕನೊಬ್ಬನ ಮೃತದೇಹವನ್ನು ಸಿಮೆಂಟ್ ಕಂಪನಿ ಸಿಬ್ಬಂದಿ ಪ್ರಾಣಿ ಎಳೆದೊಯ್ಯುವಂತೆ ರಸ್ತೆಯಲ್ಲಿ ಎಳೆದೊಯ್ದಿರುವ ಅಮಾನುಷ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇದಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿರುವ ಶ್ರೀ ಸಿಮೆಂಟ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಚಂದನ್ ಸಿಂಗ್ (35) ಮೃತ ದುರ್ದೈವಿ.
ಚಂದನ್ ಸಿಂಗ್ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಂದನ್ ಮೃತದೇಹವನ್ನು ಸಿಮೆಂಟ್ ಕಂಪನಿ ಸಿಬ್ಬಂದಿಗಳು ರಸ್ತೆಯಲ್ಲಿ ದರದರನೆ ಎಳೆದುಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ವೈರಲ್ ಆಗಿದೆ. ಮನುಷತ್ವವಿಲ್ಲದವರಂತೆ ಮೃತದೇಹವನ್ನು ರಸ್ತೆಯಲ್ಲಿ ಎಳೆದೊಯ್ದ ಸಿಮೆಂಟ್ ಕಂಪನಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬೆನ್ನಲ್ಲೇ ಎಚ್ಚೆತ್ತ ಸೇಡಂ ಪೊಲಿಸರು 6 ಜನರು ಬಂಧಿಸಿದ್ದಾರೆ. ಹೈದರ್ ಅಲಿ, ರವಿ ಶಂಕರ್, ಹರಿಂದರ್ ನಿಶಾದ್, ಅಜಯ್, ರಮೇಶ್ ಚಂದ್ರ, ಅಖಿಲೇಶ್ ಬಂಧಿತ ಆರೋಪಿಗಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ