*ಬಿಜೆಪಿ ಮುಖಂಡನ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅಸಲಿಗೆ ನಡೆದಿದ್ದೇನು?*
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕೆಲ ದಿನಗಳ ಹಿಂದೆ ಕಲಬುರ್ಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅಸಲಿಗೆ ಅಂದು ಮಣಿಕಂಠ ರಾಠೋಡ್ ಮೇಲೆ ಹಲ್ಲೆಯೇ ನಡೆದಿರಲಿಲ್ಲ. ಆದಾಗ್ಯೂ ಸುಳ್ಲು ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿರುವುದು ತನಿಖೆಯಿಂದ ಬಟಾಬಯಲಾಗಿದೆ.
ರಾಜಕೀಯ ಉದ್ದೇಶಕ್ಕಾಗಿ ಅಪಘಾತ ಪ್ರಕರಣವನ್ನು ದುಷ್ಕರ್ಮಿಗಳಿಂದ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಕಠೆ ಕಟ್ಟಿದ್ದ ಮಣಿಕಂಠ ರಾಠೋಡ್, ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವಿರುವುದಾಗಿ ಆರೋಪಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಲಬುರ್ಗಿ ಶಹಾಬಾದ್ ಪೊಲೀಸರು, ತನಿಖೆ ನಡೆಸಿ ಬಿಜೆಪಿ ಮುಖಂಡನ ಮಹಾನಾಟಕವನ್ನು ಬಯಲು ಮಾಡಿದ್ದಾರೆ.
ಮಣಿಕಂಠ ರಾಠೋಡ್, ನ.18ರಂದು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ರತರಿ ತೆರಳುತ್ತಿದ್ದಾ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀದಾಗಿದೆ. ಘಟನೆಯಲ್ಲಿ ಮಣಿಕಂಠ ರಾಠೋಡ್ ಗಾಯವಾಗಿದೆ. ರಾಠೋಡ್ ತನ್ನ ಮತ್ತೊಂದು ಕಾರನ್ನು ಸ್ಥಳಕ್ಕೆ ತರಿಸಿ ಅಲ್ಲಿಂದ ಚಿತ್ತಾಪುರಕ್ಕೆ ತೆರಳಿ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತಗೊಂಡ ಕಾರನ್ನು ಟೋಯಿಂಗ್ ಮೂಲಕ ರಾತ್ರೋರಾತ್ರಿ ಹೈದರಾಬಾದ್ ಗೆ ಶಿಫ್ಟ್ ಮಾಡಿದ್ದರು.
ಬಳಿಕ ಚಿತ್ತಾಪುರದಿಂದ ಕಲಬುರ್ಗಿಗೆ ಬರುವಾಗ ದುಷ್ಕರ್ಮಿಗಳು ತನ್ನ ಕಾರನ್ನು ಅದ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದರು. ಅಲ್ಲದೇ ಪ್ರಕರಣವನ್ನೂ ದಾಖಲಿಸಿದ್ದರು. ಚಿತ್ತಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಠೋಡ್, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು.
ತನಿಖೆ ನಡೆಸಿದ್ದ ಪೊಲೀಸರಿಗೆ ಹಲವು ಅನುಮಾನ ವ್ಯಕ್ತವಾಗಿತ್ತು. ಹಲ್ಲೆ ಎಂದು ಆರೋಪಿಸಿದ್ದ ಕಾರಿನಲ್ಲಿ ರಕ್ತದ ಕಲೆ, ಹಲ್ಲೆಯಾದ ಬಗ್ಗೆ ಕುರುಹು ಇರಲಿಲ್ಲ. ಮಣಿಕಂಠ ರಾಠೋಡ್ ಅವರ ಕಾಲ್ ಹಿಸ್ಟ್ರಿ ಪರಿಶೀಲಿಸಿದಾಗ ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಅಂದು ರಾಠೋಡ್ ಜೊತೆ ಇದ್ದವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ನಡೆದಿದ್ದು ಹಲ್ಲೆಯಲ್ಲ ಅಪಘಾತ ಎಂಬುದು ಖಚಿತವಾಗಿದೆ. ಅಪಘಾತವನ್ನು ಹಲ್ಲೆ ಪ್ರಕರಣ ಎಂದು ಸುಳ್ಳು ಕಥೆ ಕಟ್ಟಿ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡು ಆರೋಪಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ