Kannada NewsKarnataka NewsLatest

*ಸುದೀರ್ಘ ಗೈರಾಗಿದ್ದ ಶಿಕ್ಷಕನಿಗೆ ಸಂಬಳ ಬಿಡುಗಡೆ ಹಿನ್ನೆಲೆ; ಬಿಇಒ ಸೇರಿ ಮೂವರು ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿ ಆದೇಶ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಶಾಲೆಗೆ ಸುದೀರ್ಘವಾಗಿ ಗೈರಾಗಿದ್ದ ಶಿಕ್ಷಕನಿಗೆ ವೇತನ ಬಿಡುಗಡೆ ಮಾಡಿದ್ದ ಕಾರಣಕ್ಕೆ ಬಿಇಒ ಹಾಗೂ ಇಬ್ಬರು ಎಫ್ ಡಿಎ ಅಧಿಕಾರಿಗಳು ಸೇರಿ ಮೂವರನ್ನು ಕಡ್ಡಾಯ ನಿವೃತ್ತಿಗೊಳಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

2011ರ ಅಕ್ಟೋಬರ್ ನಿಂದ 2012ರ ಆಗಸ್ಟ್ ವರೆಗೆ 11 ತಿಂಗಳಕಾಲ ನಿರಂತರವಾಗಿ ಶಿಕ್ಷಕ ರೇಣುಕಾಚಾರ್ಯ ಶಾಲೆಗೆ ಗೈರಾಗಿದ್ದರು. ಆದರೂ ಶಿಕ್ಷಕನಿಗೆ ವೇತನ ಬಿಡುಗಡೆ ಮಾಡಲಾಗಿತ್ತು. ಶಿಕ್ಷಕ ರೇಣುಕಾಚಾರ್ಯ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರ ಸಹೋದರನಾಗಿದ್ದು ಅಂಬಲಗಾ ಪ್ರಾಥಮಿಕ ಶಾಲಾ ಶಿಕ್ಷಕ ಎಂದು ತಿಳಿದುಬಂದಿದೆ.

11 ತಿಂಗಳ ಕಾಲ ಶಿಕ್ಷಕ ಶಾಲೆಗೆ ಗೈರಾಗಿದ್ದರೂ ವೇತನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಬಿಇಒ ಚಿತ್ರಶೇಖರ ದೇಗುಲಮಡಿ, ಎಫ್ ಡಿಎ ಗ್ಳಾದ ಲೋಕಪ್ಪ ಜಾಧವ್, ಗುರುರಾಜರಾವ್ ಕುಲಕರ್ಣಿ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button