ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕೊರೊನಾ ಸಂಕಷ್ಟದಿಂದಾಗಿ ಶಾಲೆಗಳು ಬಂದ್ ಆಗಿದ್ದು, ಮಕ್ಕಳು ಮನೆಯಲ್ಲೇ ಮೊಬೈಲ್ ಗೇಮ್ ಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಹೊರಗಡೆ ಆಟವಾಡಲೂ ಕೊರೊನಾ ಭೀತಿ ಉಂಟಾಗಿದ್ದು, ಮಕ್ಕಳನ್ನು ಮನೆಯಲ್ಲೇ ಕೂರಿಸಿಕೊಳ್ಳುತ್ತಿರುವ ಪೋಷಕರು ಬೇರೆ ದಾರಿಯಿಲ್ಲದೇ ಮೊಬೈಲ್ ಕೊಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹೀಗೆ ಮಗನಿಗೆ ಮೊಬೈಲ್ ಕೊಟ್ಟ ಪೋಷಕರು ಸಂಕಷ್ಟಕ್ಕೀಡಾಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಮೊಬೈಲ್ ನಲ್ಲಿ ವೀಡಿಯೋ ಗೇಮ್ ಆಡುತ್ತಿದ್ದ ಬಾಲಕನಿಗೆ ಪೋಷಕರು ಬೈದಿದ್ದಕ್ಕೆ ಮನನೊಂದು ಬಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿ ನಗರದ ಬ್ರಹ್ಮಪುರ ಬಡಾವಣೆಯಲ್ಲಿ ಬಡಾವಣೆಯಲ್ಲಿ ನಡೆದಿದೆ.
ಬ್ರಹ್ಮಪುರದ ರಾಹುಲ್ ಸೊಲ್ಲಾಪುರ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇದ್ದ ಬಾಲಕ ಬೇಜಾರಾಗಿ ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಹೆತ್ತವರು ಮೊಬೈಲ್ ಗೇಮ್ ಆಡದಂತೆ ಬೈದಿದ್ದಾರೆ. ಇದರಿಂದ ಸಿಟ್ಟಾದ ಬಾಲಕ ನಿನ್ನೆ ರಾತ್ರಿ ಎಲ್ಲರೂ ಮಲಗಿದ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ