ಪ್ರಗತಿವಾಹಿನಿ ಸುದ್ದಿ; ಉಡುಪಿ: ನೆಹರು ಹಾಗೂ ಮಹಾತ್ಮಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ನೆಹರು ಕುರ್ಚಿಗಾಗಿ ದೇಶದ ಮಾನ ಕಳೆದರೆ, ಗಾಂಧಿ ದೇಶವನ್ನು ತುಂಡು ಮಾಡಿ ಮಹಾತ್ಮರಾದರು. ಬ್ರಿಟಿಷರು ಇನ್ನೈದು ವರ್ಷ ಭಾರತದಲ್ಲಿ ಇದ್ದಿದ್ದರೆ ಭಾರತದ ಸ್ಥಿತಿ ಹೀಗಾಗದೆ ಸ್ಥಿರವಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯ್ದೆಯ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, 72 ವರ್ಷದಲ್ಲಿ ಭಾರತದ ಭೂಮಿ ಹಿಂದೂಗಳನ್ನು ಕಳೆದುಕೊಳ್ಳುತ್ತಿದೆ. ಅದ್ಭುತ ಹಿಂದೂ ಸಮಾಜ ಪಾತಾಳಕ್ಕೆ ಕುಸಿಯುತ್ತಿದೆ ಎಂದರು.
ಅಂಬೇಡ್ಕರ್ ಒಬ್ಬರು ರಾಷ್ಟ್ರೀಯ ನಾಯಕ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದು ನಮ್ಮ ದುರ್ದೈವ. ಅಂಬೇಡ್ಕರ್ ಹೇಳಿದಂತೆ ನಾವು ಅವತ್ತೇ ಮಾಡಬೇಕಿತ್ತು. ಭಾರತದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ, ಪಾಕ್‍ನ ಹಿಂದೂಗಳು ಭಾರತಕ್ಕೆ ಬರಲಿ ಎಂದು ಅವತ್ತೇ ಸಲಹೆ ಕೊಟ್ಟಿದ್ದರು ಅವರ ಮಾತಿನಂತೆ ನಾವು ಮಾಡಬೇಕಿತ್ತು. ಅವರ ಸಲಹೆಯನ್ನು ಯಾರೂ ನಡೆಸಿಕೊಡಲಿಲ್ಲ ಎಂದು ಹೇಳಿದರು.
ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಿದ್ದರಾಮಯ್ಯ ಅವರದ್ದು ಷಂಡ ಸರ್ಕಾರ. ಕಾಂಗ್ರೆಸಿಗರಿಗೆ ಇಂಜೆಕ್ಷನ್‍ನಲ್ಲಿ ಬೇರೆ ಜೀನ್ಸ್ ತುಂಬಿದೆ. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದ್ದು, ಅದಕ್ಕೆ ಈಗ ತಿದ್ದುಪಡಿ ತರಲಾಗುತ್ತಿದೆ. ಈಗ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ನವರು ಪ್ರಗತಿಪರ, ಮುಸಲ್ಮಾನರ ಜೊತೆ ಸೇರಿಕೊಂಡು ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ