ಪ್ರಗತಿವಾಹಿನಿ ಸುದ್ದಿ : ಜಾರಿನಿರ್ದೇಶನಾಲಯದ ಹೆಸರು ಬಳಸಿ ಹತ್ತಾರು ಜನರಿಗೆ ಕೋಟ್ಯಾಂತರ ಹಣ ವಂಚನೆ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಪನ (47) ಬಂಧಿತ ಆರೋಪಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಈಕೆ ತನ್ನ ಸಂಬಂಧಿಕರೂ ಸೇರಿದಂತೆ ಹಲವರಿಗೆ ವಂಚಿಸಿದ್ದಳು.
ಇ.ಡಿ ಸೀಜ್ ಮಾಡಿರುವ ಹಣ ಬರಲಿದೆ. ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆಂದು ಹೇಳಿ ಜನರನ್ನು ನಂಬಿಸುತ್ತಿದ್ದ ಕಲ್ಪನಾ, ಸೀಜ್ ಆಗಿರುವ ಹಣ ಬರಲಿಕ್ಕೆ ಇನ್ವೆಸ್ಟ್ ಮಾಡಬೇಕಿದೆ ಎಂದು ಹೇಳಿ ವಸೂಲಿ ಮಾಡುತ್ತಿದ್ದಳು. ಇದೇ ರೀತಿಯಾಗಿ ಹೆಬ್ಬಾಳದ ನಿವಾಸಿಯೊಬ್ಬರಿಗೆ ಎರಡು ಕೋಟಿಗೂ ಅಧಿಕ ಹಣ ವಂಚಿಸಿ ಪರಾರಿಯಾಗಿದ್ದಳು. ಕಳೆದ ಮೇ ತಿಂಗಳಿನಲ್ಲಿ ಆರ್‌ಬಿಐ ಮತ್ತು ಇ.ಡಿ ಯಲ್ಲಿ ಸೀಜ್ ಆಗಿರುವ ಅಮೌಂಟ್ ಇದೆ. ಒಂದು ಲಕ್ಷಕ್ಕೆ ಡಬಲ್ ತ್ರಿಬಲ್ ಹಣ ಕೊಡುತ್ತೇವೆ. ಮಾತ್ರವಲ್ಲದೇ ಜಮೀನು ಕೊಡಿಸುತ್ತೇವೆ ಎಂದು ನಂಬಿಸಿ ಹಲವರಿಂದ ಹಣ ಪಡೆದು ನಾಮ ಇಟ್ಟಿದ್ದಳು.
ಮೂಲತಃ ಚನ್ನರಾಯಪಟ್ಟಣವಳಾದ ಕಲ್ಪನಾ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದಳು. 6 ವರ್ಷಗಳಿಂದ 23 ಕೋಟಿ ವಂಚನೆ ಮಾಡಿರುವ ಬಗ್ಗೆ ಸಂತ್ರಸ್ತರು ದೂರು ನೀಡಿದ್ದು, ಇನ್ನೂ ಹಲವರಿಗೆ ವಂಚಿಸಿರುವ ಅನುಮಾನಗಳಿವೆ. ಸಂಬಂಧಿಕರು ಮತ್ತು ಪರಿಚಿತರನ್ನೇ ಮೊದಲಿಗೆ ನಂಬಿಸಿ ಹಣ ಪಡೆದಿದ್ದ ಕಲ್ಪನಾ ಗ್ಯಾಂಗ್, ಬಳಿಕ ಚೈನ್ ಲಿಂಕ್ ರೀತಿ ಹಣ ಪಡೆದು 3 ಕೋಟಿ ಹಣ ಪಡೆದಿತ್ತು. ವಂಚನೆ ಮಾಡಿದ ಹಣವನ್ನು ಮೊದಲು ಹಣ ಪಡೆದವರಿಗೆ ಹಿಂದಿರುಗಿಸಿದ್ದ ಕಲ್ಪನಾ, 6 ವರ್ಷಗಳಿಂದ ಹಲವೆಡೆ ಆಸ್ತಿಯನ್ನೂ ಖರೀದಿಸಿದ್ದಾಳೆ. ಹೆಬ್ಬಾಳ ಠಾಣೆಯಲ್ಲಿ ಕಲ್ಪನಾ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ