ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನೂತನವಾಗಿ ಆರಂಭವಾದ ಕಲ್ಪವೃಕ್ಷ ಮಹಿಳಾ ಸಂಘಟನೆಯನ್ನು ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ ಭಾನುವಾರ ಸಂಜೆ ನಗರದ ರೂಪಾಲಿ ಕನ್ವೆನ್ಶನ್ ಹಾಲ್ ನಲ್ಲಿ ಉದ್ಘಾಟಿಸಿದರು.
ಕಲ್ಪವೃಕ್ಷದಂತೆ ಕೇಳಿದ್ದನ್ನು ಕೊಡುವ, ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಸಹಕಾರ ನೀಡುವ ಸಂಘಟನೆಯಾಗಿ ಕಲ್ಪವೃಕ್ಷ ಮಹಿಳಾ ಸಂಘಟನೆ ಬೆಳೆಯಲು ಎಂದು ಮಂಗಲಾ ಅಂಗಡಿ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಉತ್ತರದ ಶಾಸಕ ಅನಿಲ್ ಬೆನಕೆ, ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ ಪಾಟೀಲ್ ಮತ್ತು ವೈದ್ಯ ರವಿ ಪಾಟೀಲ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಕಲ್ಪವೃಕ್ಷ ಸಂಘಟನೆ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲ್ಪವೃಕ್ಷ ಯಾವುದೇ ಜಾತಿ ಭೇದವಿಲ್ಲದ, ರಾಜಕೀಯ ಮತ್ತು ಲಾಭದ ಉದ್ದೇಶವಿಲ್ಲದ ಸಂಘಟನೆಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಸಮಾಜದ, ಹಿಂದುಳಿದ ವರ್ಗಗಳ ಮಹಿಳೆಯರು ಮತ್ತು ಮಕ್ಕಳ ನಡುವೆ ಕಾರ್ಯನಿರ್ವಹಿಸುತ್ತಾ ಆತ್ಮ ವಿಶ್ವಾಸದೊಂದಿಗೆ ಮಹಿಳೆಯರು ಸಮಾಜದಲ್ಲಿ ಮುಂದೆ ಬರುವಂತೆ ಮಾಡುವ ದೂರದೃಷ್ಟಿಯನ್ನು ಸಂಘಟನೆ ಇಟ್ಟುಕೊಂಡು ಶಿಕ್ಷಣ ಮತ್ತು ತರಬೇತಿಯ ಮೂಲಕ ವೃತ್ತಿಪರ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.
ಡಾ.ನೀತಾ ದೇಶಪಾಂಡೆ ಮಹಿಳಾ ಸಂಘಟನೆಗಳ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಸ್ವಾಗತವನ್ನು ಅರುಣ ಕಡಬಡಿ ಮತ್ತು ವಂದನಾರ್ಪಣೆಯನ್ನು ಸ್ನೇಹಾ ಸೈಬಣ್ಣವರು ನಡೆಸಿಕೊಟ್ಟರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ