National
*ಹಳಿತಪ್ಪಿದ ಬೆಂಗಳೂರು-ಕಾಮಾಕ್ಯಾ ಎಕ್ಸ್ ಪ್ರೆಸ್ ರೈಲು: ಓರ್ವ ಸಾವು; ರೈಲಿನಡಿ ಸಿಲುಕಿದ ಹಲವರ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು-ಕಾಮಾಕ್ಯಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾರೆ. ಹಲವರು ರೈಲಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದ ರೈಲು ಒಡಿಶಾದ ಮಂಗುಲಿಯ ಚೌಡವಾರ್ ಪ್ರದೇಶದಲ್ಲಿ ಹಳಿತಪ್ಪಿದೆ. ರೈಲಿನ 11 ಬೋಗಿಗಳು ಹಳಿತಪ್ಪಿವೆ. ಓರ್ವ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವು ಪ್ರಯಾಣಿಕರು ಹಳಿತಪ್ಪಿರುವ ಬೋಗಿಯಡಿ ಸಿಲುಕಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ರಕ್ಷಣಾ ತಂಡ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ.