
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕಳ್ಳತನಕ್ಕೆ ಬಂದಿದ್ದ ಕಳ್ಳ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಕಳ್ಳತನ ಮಾಡಿ ಎಸ್ಕೆಪ್ ಆಗಿದ್ದಾನೆ.
ಸುದ್ದಗುಂಟೆ ಪಾಳ್ಯದ ಪಿಜಿಯೊಂದರಲ್ಲಿ ರಾತ್ರಿ 3:30ರ ವೇಳೆ ಈ ಘಟನೆ ನಡೆದಿದ್ದು, ಎಲ್ಲರೂ ಮಲಗಿದ್ದ ವೇಳೆ ಪಿಜಿಗೆ ಎಂಟ್ರಿ ಕೊಟ್ಟಿದ್ದ ಖದೀಮ ಮೊದಲಿಗೆ ಎಲ್ಲಾ ರೂಮ್ ಗಳ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾನೆ. ಆ ಬಳಿಕ ಒಂದು ಕೋಣೆಗೆ ತೆರಳಿ ಮಲಗಿದ್ದ ಯುವತಿಯ ಮೈಕೈ ಮುಟ್ಟಿ ಲೈಂಗಿಕ ದೌಜನ್ಯವೆಸಗಿದ್ದಾನೆ.
ಈ ವೇಳೆ ಎಚ್ಚರಗೊಂಡ ಯುವತಿ ಆತನಿಗೆ ವಿರೋಧ ವ್ಯಕ್ತಪಡಿಸಿದಾಗ ಆತ ಆಕೆಯ ಮೇಲೆ ಹಲ್ಲೆ ಮಾಡಿ ರೂಮ್ ನಲ್ಲಿದ್ದ 2500 ರೂ. ಕಳ್ಳತನ ಮಾಡಿ ಎಸ್ಕೆಪ್ ಆಗಿದ್ದಾನೆ ಎನ್ನಲಾಗಿದೆ.
ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.