Kannada NewsKarnataka NewsLatest

*BREAKING: ಬೆಳಗಾವಿಯಲ್ಲಿ ಆಲಿಕಲ್ಲು ಮಳೆ: ವಾಹನ ಸವಾರರ ಪರದಾಟ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ರಾಅಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಹಾಗೂ ಸಾಧಾರಣ ಮಳೆಯಾಗುತ್ತಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆಗೆ ವರುಣ ತಂಪೆರೆದಂತಾಗಿದೆ.

ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಶಿವಬಸವನಗರ, ನೆಹರು ನಗರ, ಎಸ್ ಪಿ ಕಚೇರಿ ಸುತ್ತಮುತ್ತ ಭಾರಿ ಆಲಿಕಲ್ಲು ಮಳೆಯಾಅಗುತ್ತಿದ್ದು, ಏಕಾಏಕಿ ಸುರಿದ ಮಳೆಗೆ ಜನರು ಕಂಗಾಲಾಗಿದ್ದಾರೆ.

Home add -Advt

ಎಸ್ ಪಿ ಕಚೇರು ಮುಂದೆ ಆಲಿಕಲ್ಲು ರಾಶಿ ಹಾಕಿದಂತೆ ಬಿದ್ದಿವೆ. ಮತ್ತೊಂದೆಡೆ ಮೀನುಗಾರಿಕಾ ಉಪನಿರ್ದೇಶಕರ ಕಚೇರಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದೀಢಿರ್ ಸುರುದ ಆಲಿಕಲ್ಲು ಮಳೆಯಿಂದಾಗಿ ನಗರದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

Related Articles

Back to top button