Kannada NewsKarnataka NewsLatest

*ಬೈಕ್ ಸವಾರನ ಮೇಲೆ ದರ್ಪ ತೋರಿದ ನ್ಯಾಯಾಧೀಶೆಯ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ; ನ್ಯಾಯಾಧೀಶೆ ಗಾಯತ್ರಿ ಅವರು ತನ್ನ ಇನ್ನೋವಾ ಕಾರಿನಲ್ಲಿ ಹೋಗುವಾಗ, ಬೈಕ್ ಸವಾರ ವಿನಯ್ ಎಂಬಾತ ಅತಿವೇಗವಾಗಿ ಬಂದು ಕಾರನ್ನು ಓವರ್‌ಟೇಕ್ ಮಾಡಿ, ಕೈ ತೋರಿಸಿ ಹೋಗಿದ್ದ ಅನ್ನೋ ಆರೋಪ ಕೇಳಿಬಂದಿತ್ತು. ಅಷ್ಟಕ್ಕೆ ಕೋಪಗೊಂಡ ನ್ಯಾಯಾಧೀಶರು, ಬೈಕನ್ನು ಬೆನ್ನತ್ತಿ ಸವಾರ ವಿನಯ್ ಮೇಲೆ ದರ್ಪ ತೋರಿಸಿ ರಂಪಾಟ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನ್ಯಾಯಾಧೀಶೆಗೆ ವರ್ಗಾವಣೆ ಮಾಡಲಾಗಿದೆ.

ನಂತರ ಬೈಕ್ ಸವಾರನ ಮೇಲೆ ನ್ಯಾಯಾಧೀಶೆ ಗಾಯತ್ರಿ ಅವರು ಎಫ್‌ಐಆರ್ ಕೂಡ ದಾಖಲು ಮಾಡಿದ್ದರು. ಈ ಎಫ್‌ಐಅರ್ ರದ್ದು ಮಾಡುವಂತೆ ಬೈಕ್ ಸವಾರ ವಿನಯ್ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಪೀಠ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಧೀಶೆ ಗಾಯತ್ರಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟರ್‌ಗೆ ಸೂಚಿಸಿದ್ದರು

ಪರಿಶೀಲನೆ ನಡೆಸಿದ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ನ್ಯಾಯಾಧೀಶೆ ಗಾಯತ್ರಿ ಅವರನ್ನು ವರ್ಗಾವಣೆ ಮಾಡಿದ್ದಾರೆ

ಕೋಲಾರ ಜಿಲ್ಲೆಯ ಮಾಲೂರು ಜಿಎಂಎಫ್‌ಸಿ ನ್ಯಾಯಾದೀಶೆ ಆಗಿದ್ದ ಗಾಯತ್ರಿ ಅವರನ್ನು ಬೀದರ್ ಹುಮನಾಬಾದ್‌ನ ಜಿಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ಹೈಕೋರ್ಟ್ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button