ಪ್ರಗತಿವಾಹಿನಿ ಸುದ್ದಿ; ಕನಕಪುರ: ನಾವು ಬಲಿದಾನಕ್ಕೂ ಸಿದ್ಧರಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆಯನ್ನು ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ
ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ನಡೆದ ‘ಕನಕಪುರ ಚಲೋ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೆಲುವಿಗಾಗಿಯೇ ನಮ್ಮ ಹೋರಾಟ. ನಮ್ಮ ತಾಕತ್ತೇನು ಎಂಬುದನ್ನು ನಾವು ತೋರಿಸುತ್ತೇವೆ. ಹಿಂದೂ ಸಮಾಜದ ತಾಕತ್ತು ತೋರಿಸುತ್ತೇವೆ. ಹಿಂದೂಗಳಿಗೆ ವಂಚಿಸಲು ಬಿಡುವುದಿಲ್ಲ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವುದು ಅಸಾಧ್ಯ ಎಂದರು.
ನೀವು ಮತಾಂತರ ಮಾಡಲು ಷಡ್ಯಂತ್ರ ರೂಪಿಸಿದ್ದೀರಿ. ನಾವು ಬಲಿದಾನಕ್ಕೂ ಸಿದ್ಧರಿದ್ದೇವೆ. ಅದಕ್ಕೂ ಮೊದಲು ನಿಮ್ಮ ಬಲಿದಾನವಾಗಲಿದೆ. ಇದನ್ನೂ ಮೀರಿ ನೀವು ಮುಂದುವರಿದರೆ ನಿಮ್ಮ ರಾಜಕೀಯ ಭವಿಷ್ಯ ನಾಶವಾಗುತ್ತದೆ ಎಂದು ಡಿಕೆ ಶಿವಕುಮಾರ್ಗೆ ಎಚ್ಚರಿಕೆ ನೀಡಿದ್ದಾರೆ.
ನಾವು ಶಾಂತಿ ಕದಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ನಾವು ಶಾಂತಿ ಕದಡಿಲ್ಲ. ನೀವು ಶಾಂತಿಯ ಹೆಸರಲ್ಲಿ ನಮ್ಮ ತಾಳ್ಮೆ ಕೆದಕುತಿದ್ದೀರಿ. ಬಾಲಗಂಗಾಧರ ನಾಥ ಸ್ವಾಮಿ ಪ್ರತಿಮೆ ಮಾಡಬಹುದಿತ್ತು. ಮಹಾತ್ಮ ಗಾಂಧೀಜಿಯವರ ಮೂರ್ತಿ ನಿರ್ಮಿಸಬಹುದಿತ್ತು, ಇಲ್ಲವೇ ಬುದ್ಧ, ಪೇಜಾವರ ಶ್ರೀಗಳ ಮೂರ್ತಿ ನಿರ್ಮಿಸಬಹುದಿತ್ತು, ಆದರೆ ಸೋನಿಯಾ ಗಾಂಧಿ ಓಲೈಕೆಗಾಗಿ ಯೇಸು ಮೂರ್ತಿ ಮಾಡಿದ್ದಕ್ಕೆ ನಮ್ಮ ವಿರೋಧವಿದೆ. ಹಿಂದೂಗಳು ಮುಗ್ದರು. 33 ಕೋಟಿ ದೇವರು ಇದ್ದಾರೆ ಎಂದು ಹೇಳುತ್ತಾರೆ. ದೇವರಲ್ಲಿ ಒಬ್ಬ ಅಲ್ಲ, ಒಬ್ಬ ಯೇಸು ಇದ್ದರೆ ನಮ್ಮ ವಿರೋಧವಿಲ್ಲ. ಆದರೆ ಅವರ ಹೆಸರಿನಲ್ಲಿ ಮತಾಂತರ ನಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಗುಡುಗಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ