Latest

ವಿಶ್ವದ ಮೊದಲ ಟೆಕ್ಸ್ಟ್ ಮೆಸೇಜ್ ಯಾರು, ಯಾರಿಗೆ, ಯಾವಾಗ ಕಳುಹಿಸಿದರು ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಪಾರಿವಾಳದ ಮೂಲಕ ಸಂದೇಶ ಕಳಿಸುವ ದಿನಗಳಿಂದ ಪರಿವರ್ತನೆಯಾಗುತ್ತ ಇಂದು ತಂತ್ರಜ್ಞಾನದ ಉತ್ತುಂಗದಲ್ಲಿ ಬೆರಳ ತುದಿಯಲ್ಲಿ ಸಂದೇಶಗಳ ರವಾನೆಯ ಸಾಧನದವರೆಗೂ ಬರಲಾಗಿದೆ.

ಆದರೆ ತಂತ್ರಜ್ಞಾನದ ಸುದೀರ್ಘ ಹಾದಿಯ ಸಿಂಹಾವಲೋಕನದಲ್ಲಿ 30 ವರ್ಷಗಳ ಹಿಂದೆ ವಿಶ್ವದ ಮೊದಲ ಟೆಕ್ಸ್ಟ್ ಮೆಸೇಜ್ ಯಾರು ಯಾರಿಗೆ ಕಳುಹಿಸಿದ್ದರು? ಎಂಬ ಕುತೂಹಲಕಾರಿ ಮಾಹಿತಿಯೊಂದು ಇಲ್ಲಿದೆ.

ವಿಶ್ವದ ಮೊದಲ ಪಠ್ಯ ಸಂದೇಶವನ್ನು ಡಿಸೆಂಬರ್ 3, 1992 ರಂದು UK ಯ ಬರ್ಕ್‌ಷೈರ್‌ನಲ್ಲಿರುವ ವೊಡಾಫೋನ್ ಎಂಜಿನಿಯರ್ ಒಬ್ಬರು ಕಳುಹಿಸಿದ್ದಾರೆ. SMS ತಂತ್ರಜ್ಞಾನವನ್ನು ಪರೀಕ್ಷಿಸಲು, ಸಾಫ್ಟ್‌ವೇರ್ ಪ್ರೋಗ್ರಾಮರ್ ನೀಲ್ ಪ್ಯಾಪ್‌ವರ್ಥ್ ಅವರು ಕ್ರಿಸ್‌ಮಸ್ ಪಾರ್ಟಿಯಲ್ಲಿದ್ದಾಗ ಕಂಪನಿಯ ಮೇಲಧಿಕಾರಿಗಳಲ್ಲಿ ಒಬ್ಬರಾದ ರಿಚರ್ಡ್ ಜಾರ್ವಿಸ್‌ಗೆ ಮೆರ್ರಿ ಕ್ರಿಸ್‌ಮಸ್ ಸಂದೇಶ ಕಳುಹಿಸಿದ್ದರು.

ಅವರ ಈ ಮೊದಲ ಸಂದೇಶವನ್ನು ಜಾರ್ವಿಸ್ ಆರ್ಬಿಟೆಲ್ ಅವರು 901 ಫೋನ್‌ನಲ್ಲಿ ಸ್ವೀಕರಿಸಿದ್ದರು.

ಟಿವಿ ಕಾರ್ಯನಿರ್ವಾಹಕನ ಜೀವಕ್ಕೇ ಮುಳುವಾಯಿತು ಕೂದಲು ಕಸಿ

Related Articles

Back to top button