Latest

ಮಹಾ ಸಚಿವರ ಕುತಂತ್ರ ಬಿಜೆಪಿ ವರಿಷ್ಠರ ಗಮನಕ್ಕೆ ತನ್ನಿ: ಚಂದರಗಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರದ ಸಚಿವರು ಇಂಥ ತ್ವೇಷಮಯ ವಾತಾವರಣವಿರುವ ಸಂದರ್ಭದಲ್ಲಿ ಬೆಳಗಾವಿಗೆ ಬರದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿಕೊಂಡಿದ್ದಲ್ಲದೆ, ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ ಮುಖ್ಯಮಂತ್ರಿಗೇ ಸವಾಲು ಹಾಕುವ ಕೆಲಸವನ್ನು ಮಹಾರಾಷ್ಟ್ರದ ಸಚಿವರು ಮಾಡಿರುವುದು ಖಂಡನೀಯ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರಿಗೆ ವಿಡಿಯೋ ಬಿಡುಗಡೆ ಮಾಡಿರುವ ಅವರು, ಇದೇ ಡಿ.6 ರಂದು ಬೆಳಗಾವಿಗೆ ಭೇಟಿ ನೀಡಲು ನೀರ್ಧರಿಸಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ ದೇಸಾಯಿ ಅವರು “ಮತ್ತೆ ಬೆಳಗಾವಿಗೆ ಬಂದೇ ತೀರುತ್ತೇವೆ” ಎಂದು ಹೇಳಿಕೆ ನೀಡಿರುವ ದುರುದ್ದೇಶದ ಹಿಂದೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ತ್ವೇಷಮಯ ವಾತಾವರಣದಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಭೇಟಿ ನೀಡುವುದು ಸರಿಯಲ್ಲ ಎಂದು ನಮೃವಾಗಿ ಹೇಳಿದ ಮೇಲೆ ಶುಕ್ರವಾರ ತಾವು ಬಂದೇ ಬರುವುದಾಗಿ ಹೇಳಿಕೆ ನೀಡಿದ್ದಾರೆ.  ಇವರಿಬ್ಬರೂ ಪ್ರಧಾನಿ ಮೋದಿಯವರ ಬಳಿ  ಕರ್ನಾಟಕಕ್ಕೆ ಹೋಗಲು ತಮಗೆ  ಅಡಚಣೆ ಉಂಟುಮಾಡಿ  ಅನ್ಯಾಯ ಮಾಡಿದ್ದಾಗಿ ಹೇಳುವ ಮೂಲಕ  ರಾಷ್ಟ್ರಮಟ್ಟದಲ್ಲಿ ಕುತಂತ್ರ ಮಾಡುತ್ತಿದ್ದಾರೆ ಎಂದರು.

ಮಹಾರಾಷ್ಟ್ರದ ಸಚಿವರು ಹಾಕಿರುವ ಸವಾಲನ್ನು ಗಂಭೀರವಾಗಿ ಪರಿಸಿಗಣಿಸಿ, ಕೇಂದ್ರದ ಬಿಜೆಪಿ ನಾಯಕರಿಗೆ ಹಾಗೂ ಪಕ್ಷದ ನಾಯಕರ ಗಮನಕ್ಕೆ ತಂದು ಮಹಾರಾಷ್ಟ್ರದ ಕುತಂತ್ರವನ್ನು ಬಯಲಿಗೆ ತರಬೇಕು. ಮುಖ್ಯಮಂತ್ರಿಗಳು ಕೇವಲ ಹೇಳಿಕೆ ನೀಡಿದರೆ ಸಾಲುವುದಿಲ್ಲ ಎಂದು ಅಶೋಕ ಚಂದರಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Home add -Advt

ಬಸವರಾಜ ಬೊಮ್ಮಾಯಿ ಅವರನ್ನು ತಗ್ಗಿನಲ್ಲಿ ಕೆಡವಲು ಎಲ್ಲ ಪ್ರಯತ್ನಗಳನ್ನು ಮಹಾರಾಷ್ಟ್ರದ ಸಚಿವರು ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಗಡಿಭಾಗ ಶಾಂತವಾಗಿರುವುದಿಲ್ಲ ಎಂದು ಸಹ ಻ವರು ಹೇಳಿದ್ದಾರೆ.

Related Articles

Back to top button