Kannada NewsKarnataka NewsLatest

*ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ; ನಾಮಫಲಕಗಳನ್ನು ಬದಲಿಸಲು ಸರ್ಕಾರದಿಂದ ಗಡುವು*

ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ; ಸಿಎಂ ಎಚ್ಚರಿಕೆ


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಕನ್ನಡ ಕಡ್ಡಾಯ ಆದೇಶ ಹೊರಡಿಸಿದ್ದಾರೆ.

ಕರ್ನಟಕದಲ್ಲಿ ಕನ್ನಡ ಕಡ್ಡಾಯ ವಿಚಾರವಾಗಿ ಇಂದು ವಿಧನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡವೆ ಸಾರ್ವಭೌಮ. ವ್ಯವಹಾರದಲ್ಲಿಯೂ ಕನ್ನಡ ಇರಬೇಕು. ಈ ವಿಚಾರವಾಗಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಶೇ.50ರಷ್ಟು ಕನ್ನಡ ಶೇ.50ರಷ್ಟು ಬೇರೆ ಭಾಷೆಗಳಿಗೆ ಅವಕಾಶವಿತ್ತು. ಆದರೆ ಇಂದು ನಡೆದ ಸಭೆಯಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿರಬೇಕು ಎಂಬ ನಿಯಮ ಜಾರಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಾಮಫಲಕಗಳು, ಜಾಹೀರಾತುಗಳು, ಎಲ್ಲಾ ಬೋರ್ಡ್ ಗಳಲ್ಲಿಯೂ ಶೆ.60ರಷ್ಟು ಕನ್ನಡ ಭಾಷೆಯಲ್ಲಿಯೇ ಇರಬೇಕು. ಶೇ.40ರಷ್ಟು ಮಾತ್ರ ಬೇರೆ ಭಾಷೆಗಳಿಗೆ ಅವಕಾಶ. ಈ ಬಗ್ಗೆ ಸರ್ಕಾರದಿಂದಲೇ ಶೀಘ್ರದಲ್ಲಿ ನಿಯಮ ಜಾರಿಗೆ ತರಲಾಗುವುದು ಎಂದರು. ಈಗಿರುವ ಬೋರ್ಡ್ ಗಳನ್ನು ಬದಲಿದ್ಸಲು ಅವಕಾಶ್ ನೀಡಲಾಗುವುದು. 2024ರ ಫೆ.28ರೊಳಗೆ ರಾಜ್ಯಾದ್ಯಂತ ಎಲ್ಲಾ ನಾಮಫಲಕಗಳು, ಬೋರ್ಡ್ ಗಳನ್ನು ಬದಲಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button