Cancer Hospital 2
Beereshwara 36
LaxmiTai 5

*ಆಗಸ್ಟ್ 4 ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅಗಸ್ಟ್ 4 ಶುಕ್ರವಾರ ಸಂಜೆ 5 ಗಂಟೆಗೆ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ, ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಹಾಗೂ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಚಲನಚಿತ್ರ ನಿರ್ಮಾಪಕಿ ಲಕ್ಷ್ಮೀ ವಜ್ರಮುನಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗಣೇಶ್ ಫುಡ್ ಪ್ರಾಡಕ್ಟ್ಸ್ ಪ್ರೈ.ಲಿ ನ ನಾಗರಾಜ ರಾವ್, ಶ್ರೀನಿವಾಸ ಜೋಗಿ ಬೆಂಗಳೂರು, ರಾಮಣ್ಣ ಎಚ್. ಕೋಡಿಹೊಸಹಳ್ಳಿ ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

Emergency Service

ತುಮಕೂರಿನ ಸಿ.ವಿ.ಮಹಾದೇವಯ್ಯ, ಉಡುಪಿಯ ಟಿ.ಎನ್. ರಾಘವೇಂದ್ರ ರಾವ್ ಅವರಿಗೆ ಕ್ರಮವಾಗಿ 2021 ಹಾಗೂ 2022 ನೆಯ ಸಾಲಿನ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಕಾಸರಗೋಡಿನ ಶ್ರೀ ಕಾಸರಗೋಡು ಚಿನ್ನ, ವಿಜಯಪುರದ ಭಾರತಿ ಬಿಜಾಪುರ, ಬೆಂಗಳೂರಿನ ರಂಗಶ್ರೀ ರಂಗಸ್ವಾಮಿ ಅವರನ್ನು ಕ್ರಮವಾಗಿ 2021, 2022 ಹಾಗೂ 2023 ನೆಯ ಸಾಲಿನ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಬಾಗಲಕೋಟೆ ಜಿಲ್ಲೆಯ ಶ್ರೀಮತಿ ದೊಡ್ಡನಾಗಮ್ಮ , ಚಾಮರಾಜನಗರ ಜಿಲ್ಲೆಯ ಶ್ರೀಮತಿ ಚಿನ್ನಮ್ಮ, ಹಾವೇರಿ ಜಿಲ್ಲೆಯ ಶ್ರೀಮತಿ ಸಾವಕ್ಕ ಯಲ್ಲಪ್ಪ ಓಲೆಕಾರ ಹಾಗೂ ಬಾಗಲಕೊಟೆ ಜಿಲ್ಲೆಯ ಶ್ರೀಮತಿ ಬೋರವ್ವ ಬಾಗನ್ನವರ ಇವರುಗಳಿಗೆ ಕ್ರಮವಾಗಿ 2019, 2020, 2021 ಮತ್ತು 2022 ನೆಯ ಸಾಲಿನ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.


Bottom Add3
Bottom Ad 2