Belagavi NewsBelgaum NewsKannada NewsKarnataka NewsNational

*ಗೋವಾದಲ್ಲಿ ಕನ್ನಡಿಗನ ಮೇಲೆ ಹಲ್ಲೆ: ಕ್ರಮಕೈಗೊಳ್ಳದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬದುಕು ಕಟ್ಟಿಕೊಳ್ಳಲು ಗೋವಾದಲ್ಲಿ ನೆಲೆಸಿರುವ ಕನ್ನಡಿಗನ ಮೇಲೆ ದುಷ್ಕರ್ಮಿಗಳ ಗ್ಯಾಂಗ್​ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ್​​ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ. 

ಗೋವಾದಲ್ಲಿ ಕರ್ನಾಟಕದವರು ಮತ್ತು ಕನ್ನಡಿಗರನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ. ಕನ್ನಡಿಗ ಲಾರಿ ಚಾಲಕ ಅನಿಲ್ ರಾಠೋಡ್​, ಮಹಾರಾಷ್ಟ್ರದಿಂದ ಗೋವಾಕ್ಕೆ ಕಲ್ಲು ಸಾಗಿಸುತ್ತಿದ್ದರು. ಈ ವೇಳೆ ಗೋವಾದ ಪ್ರೆಡ್ನೆ ಬಳಿಯ ರಸ್ತೆಯಲ್ಲಿ ಕಾರು, ಜೀಪ್​ನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಲಾರಿ ಅಡ್ಡಗಟ್ಟಿ ಗೂಂಡಾಗಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿಂದಿಸಿ ಹಲ್ಲೆ ಮಾಡಿದ್ದಾರೆ ಹಲ್ಲೆ ಮಾಡುತ್ತಿರುವುದನ್ನು ಲಾರಿ ಚಾಲಕ ಅನಿಲ್ ರಾಠೋಡ್​ ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. 

ಹಲ್ಲೆಗೋಳಗಾದ ಅನೀಲ್ ಗೋವಾದ ಪ್ರೆಡ್ನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಗೋವಾದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳ ಬಗ್ಗೆ ಗೋವಾ ಸಿಎಂ ಜೊತೆ ಮಾತಾಡಿ ಕನ್ನಡಿಗರನ್ನು ರಕ್ಷಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಅನಿಲ್ ಮನವಿ ಮಾಡಿದ್ದಾರೆ. 

Home add -Advt

Related Articles

Back to top button