Kannada NewsKarnataka NewsLatest

*ನದಿ ಪಾಲಾದ ಅಯ್ಯಪ್ಪ ಮಾಲಾಧಾರಿಗಳು: ಬಾಲಕ ಶವವಾಗಿ ಪತ್ತೆ; ಓರ್ವನ ರಕ್ಷಣೆ*

ಪ್ರಗತಿವಾಹಿನಿ ಸುದ್ದಿ: ನಂಜನಗೂಡು ಬಳಿ ಕಪಿಲಾ ನದಿಯಲ್ಲಿ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ರಕ್ಷಿಸಲಾಗಿದ್ದು, ಓರ್ವ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.

ಕಪಿಲಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಐವರು ಅಯ್ಯಪ್ಪ ಮಾಲಾಧಾರಿಗಳಲ್ಲಿ ಮೂವರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಇಬ್ಬರು ಈಜಿ ದಡ ಸೇರಿ ಪ್ರಾಣ ರಕ್ಷಿಸಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲಿಸರು, ಮುಳುಗು ತಜ್ಞರ ತಂಡ ನೀರಿನಲ್ಲಿ ಕೊಚ್ಚಿ ಹೋದವರಿಗಾಗಿ ಶೋಧ ನಡೆಸಿದೆ.

ಈ ನಡುವೆ ನೀರುಪಾಲಾಗಿದ್ದ ಗವಿರಂಗ ಎಂಬುವವರನ್ನು ರಕ್ಷಿಸಲಾಗಿದೆ. 16 ವರ್ಷದ ಬಾಲಕ ಅಪ್ಪು ಶವವಾಗಿ ಪತ್ತೆಯಾಗಿದ್ದು, ಇನ್ನೋರ್ವ ರಾಕೇಶ್ ಎಂಬಾತನಿಗಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ.

Home add -Advt

ಮೂವರು ತುಮಕೂರು ಜಿಲ್ಲೆಯ ಕೊರಟಗೆರೆಯವರು ಎನ್ನಲಾಗಿದೆ.

Related Articles

Back to top button