Latest

ಕರಾಸ್ತ್ರ ಚಿತ್ರದ ಪೋಸ್ಟರ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಮೂಲಕ ಪ್ರಥಮ ಕಾಣಿಕೆಯಾಗಿ ‘ಕರಾಸ್ತ್ರ’ ಕನ್ನಡ ಚಲನಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆ. ಸೆನ್ಸಾರ್ ಆದ ತಕ್ಷಣ ಚಿತ್ರಮಂದಿರಗಳಿಗೆ ಬಿಡುಗಡೆ ಮಾಡಲಾಗುವದು ಎಂದು ಚಿತ್ರದ ನಿರ್ದೇಶಕ ನಾರಾಯಣ ಪೂಜಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕಲಾವಿದರನ್ನು ಸೇರಿಸಿಕೊಂಡು ಸಿನಿಮಾ ಮಾಡಲಾಗಿದೆ. ದ್ವಾಪರ ಯುಗದಲ್ಲಿ ಆದಂತಹ ಸಮಸ್ಯೆಗೆ ಕಲಿಯುಗಲ್ಲಿ ಪರಿಹಾರ ಹುಡುಕಲು ಬಂದ ನಾಯಕಿ ಸಮಸ್ಯೆ ಬಗೆಹರಿಸುತ್ತಾಳೇಯೋ ಇಲ್ಲವೋ ಎಂಬ ಕತೆಯ ಎಳೆ ಇಟ್ಟುಕೊಂಡು ಚಲನಚಿತ್ರ ಮಾಡಲಾಗಿದೆ. ಇದು ಕೌಟುಂಬಿಕ, ಭಾವನಾತ್ಮಕ ಹಾಗೂ ಸಾಹಸಮಯವಾಗಿದ್ದು ಎಲ್ಲ ವಯೋಮಾನದವರು ಕುಳಿತು ನೋಡಬಹುದಾಗಿದೆ. ಇದರಲ್ಲಿನ ಮುಖ್ಯ ಪಾತ್ರದಲ್ಲಿ ರಿಯಲ್ ಕರಾಟೆ ಪಟುಗಳು ಮತ್ತು ನಾಲ್ವರು ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ.ಚಿತ್ರೀಕರಣ ಕೂಡ ಹುಬ್ಬಳ್ಳಿ, ಬ್ಯಾಡಗಿ, ಗದಗ, ಹಾವೇರಿ ಸುತ್ತಮುತ್ತ ನಡೆಸಲಾಗಿದ್ದು ಕತೆ, ಚಿತ್ರಕತೆ, ಸಾಹಿತ್ಯ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದೇನೆ ಎಂದರು.

ತಾರಾಗಣದಲ್ಲಿ ನಾರಾಯಣ ಪೂಜಾರ, ಕ್ಷಿತಿ ವೀರಣ್ಣ, ಬೇಬಿ ಸಾಕ್ಷಿ, ಕಾರ್ತಿಕ ಪೂಜಾರ, ಮನಿಷಾ ಕಬ್ಬೂರ, ಬೇಬಿ ಕೃಷ್ಣವೇಣಿ, ಹನುಮಂತ, ಮಾಲತೇಶ ಸುಂಕದ, ಅಬ್ದುಲ್ಲ ಮುನ್ನಾ ಎರೇಸೀಮೆ , ಬಸವರಾಜ ಹೋಬಾಳೆ, ಭುವನಾ, ವಿದ್ಯಾ ಬೆಳಗಾಂವ, ಹೀತೇಶ, ವಿಜಯಕುಮಾರ ನಾಗರತ್ನ ಮೊದಲಾದವರು ಅಭಿನಯಿಸಿದ್ದಾರೆ , ತಾಂತ್ರಿಕ ವರ್ಗದಲ್ಲಿ ಸಹಾಯಕ ನಿರ್ದೇಶಕರಾಗಿ ಸತೀಶ ಕ್ಯಾತನಘಟ್ಟ, ಕಣಿವೆಪ್ಪ, ಬಿ.ಪವನ ಕುಲಕರ್ಣಿ, ಛಾಯಾಗ್ರಹಣ ಶರಣು ಸುಗ್ನಳ್ಳಿ, ಲಕ್ಷö್ಮಣ, ಮೈಲಾರಿ, ಗಗನ, ಸ್ಥಿರಚಿತ್ರಣ ವಿನ್ಸೆಂಟ್ ಪರೇರಾ, ಸಂಕಲನ ಶರಣು ಸುಗ್ನಳ್ಳಿ, ಅಮಿತ್ ಬಳ್ಳಾರಿ, ಸಂಗೀತ ಮಹಾರಾಜ್, ಕರಾಟೆ ಮಂಜೆ, ಶಂಕರ ಶಾಸ್ತಿç ಸಾಹಸ, ನೃತ್ಯ ವಿನಾಯಕ,ಕಲಾ ನಿರ್ದೇಶನ ಶಾಂತಯ್ಯ ಪರಡಿಮಠ, ವಸ್ತ್ರಾಲಂಕಾರ ಹಾಗೂ ಪ್ರಸಾಧನ ಬಿ.ಎಚ್.ನಯನಾ, ಪತ್ರಿಕಾ ಸಂಪರ್ಕ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ ಅವರದಿದೆ . ಇದೆ ಸಂದರ್ಭದಲ್ಲಿ ‘ಕರಾಸ್ತ್ರ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪತ್ರಿಕಾ ಗೋಷ್ಟಿಯಲ್ಲಿ ಮನಿಷಾ ಕಬ್ಬೂರ, ಪೂರ್ಣಾ, ಸ್ಟೆಪಿ, ಚೇತನ, ವಿನೋದ ಭಾಂಡಗೆ ಮತ್ತು ಚಿತ್ರತಂಡದವರು ಪಾಲ್ಗೊಂಡಿದ್ದರು.

ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕನ್ನಡಕ್ಕೂ ಡಬ್ ಆಗುವ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button