*MES ಮುಖಂಡ ಶುಭಂ ಶಿಳಕೆ ಗಡಿಪಾರು ಮಾಡುವಂತೆ ಕಮಿಷನರ್ ಗೆ ಮನವಿ ಮಾಡಿದ ಕರವೇ ಕಾರ್ಯಕರ್ತರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗಡಿ ಭಾಗದಲ್ಲಿ ನಿರಂತರವಾಗಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ನಾಡವಿರೋಧಿ ಚಟುವಟಿಕೆ ನಡೆಸುತ್ತಿರುವ ಎಂ.ಇಎಸ್ ಮುಖಂಡ ಶುಅಭಂ ಶಿಳಕೆಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದರು.
ಬೆಳಗವೈ ಗಡಿ ಭಾಗದಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕರ ಸಹೋದರತ್ವಕ್ಕೆ ಭಾವದಿಂದ ಬದುಕುತ್ತಿದ್ದಾರೆಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬೆಳಗಾವಿಯಲ್ಲಿ ಮುಗ್ಧ ಮರಾಥಿ ಭಾಷಿಕರನ್ನು ಪ್ರಚೋದಿಸಿ ಭಾಷಾ ಬಾಂಧವ್ಯಕ್ಕೆ ಧಕ್ಕೆ ತರುತ್ತಿರುವ ಎಂಇಎಸ್ ಮುಖಂಡ ಶುಭಂ ಶಿಳಕೆ ಪ್ರಚೋದನಕಾರಿ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿದ್ದು, ಇದರಿಂದ ಬೆಳಗಾವಿಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಶುಭಂ ಶಿಳಕೆ ವಿರುದ್ಧ ರಾಜ್ಯದ್ರೋಹದ ಅನೇಕ ಪ್ರಕರಣಗಳಿವೆ. ನಾಡದ್ರೋಹಿ ಎಂಇಎಸ್ ಮುಖಂಡನಾಗಿರುವ ಗೂಂಡಾನನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮ ರಾಜ್ಯದಲ್ಲಿದ್ದುಕೊಂಡು ನಮ್ಮ ರಾಜ್ಯದ ಸಹಾಯ ಸವಲತ್ತುಗಳನ್ನು ಪಡೆದುಕೊಂಡು ನಮ್ಮ ರಾಜ್ಯದ ವಿರುದ್ಧ ಮುಗ್ಧ ಮರಾಠಿ ಭಾಷಿಕರನ್ನು ಎತ್ತುಕಟ್ಟುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಎಂಇಎಸ್ ಗೂಂಡಾ ಶುಭಂ ಶಿಳಕೆಯನ್ನು ಶೀಘ್ರವಾಗಿ ಗಡಿಪಾರು ಮಾಡುವಂತೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದರು.