Belagavi NewsBelgaum NewsKannada NewsKarnataka NewsPolitics
*ಪಾಲಿಕೆಯ ಎಂಇಎಸ್ ಸದಸ್ಯನ ವಿರುದ್ಧ ಪ್ರತಿಭಟಿಸಿದ ಕರವೇ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಪರಿಷತ್ ಸಭೆಯಲ್ಲಿ ಎಂಇಎಸ್ ಸದಸ್ಯ ರವಿ ಸಾಳುಂಕೆ ಪುಂಡಾಟ ಮಾಡಿದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಎಂಇಎಸ್ ಪಾಲಿಕೆ ಸದಸ್ಯ ರವಿ ಸಾಳುಂಕೆ ವಿರುದ್ಧ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರ ಹಾಕಿ, ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪಾಲಿಕೆ ಪರಿಷತ್ ಸಭಾಂಗಣಕ್ಕೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಮುತ್ತಿಗೆ ಯತ್ನಿಸಿದನ್ನು ಪೊಲೀಸರು ತಡದರು.
ಈ ವೇಳೆ ಪ್ರತಿಭಟಿಸಿದ ಕರವೇ ಕಾರ್ಯಕರ್ತರು ಎಂಇಎಸ್ ಸದಸ್ಯ ರವಿ ಸಾಂಳುಕೆ ಅಮಾನತು ಮಾಡಲು ಒತ್ತಾಯಿಸಿದರು. ನಾಡದ್ರೋಹಿ ಎಂಇಎಸ್ ಪುಂಡರನ್ನು ಗಡಿ ಪಾರು ಮಾಡುವಂತೆ ಎಂಇಎಸ್ ಸದಸ್ಯನ ವಿರುದ್ಧ ಧಿಕ್ಕಾರ ಕೂಗಿದರು. ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತ ಕರವೇ ಕಾರ್ಯಕರ್ತರನ್ನು ಪೊಲೀಸರು ಕಚೇರಿಯಿಂದ ಹೊರ ಕರೆದುಕೊಂಡು ಹೋದರು.