Belagavi NewsBelgaum News

*ಕರವೇ ಸದಸ್ಯತ್ವ ಅಭಿಯಾನಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಕರವೇ ಸದಸ್ಯತ್ವ ಅಭಿಯಾನಕ್ಕೆ ಚಿಕ್ಕೋಡಿ ಪಟ್ಟಣದ ಸಂಪದನಾ ಚರಮೂರ್ತಿ ಮಠದ ಶ್ರೀಗಳು ಚಾಲನೆ ನೀಡಿದರು. ಚಿಕ್ಕೋಡಿ ತಾಲೂಕಿನ ಕರವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶ್ರೀ ಮಠದಲ್ಲಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಉಪಾಧ್ಯಕ್ಷರಾದ ಸಂತೋಷ ಪೂಜಾರಿ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.

ಶ್ರಿಗಳ ಅಮೃತ ಹಸ್ತದಿಂದ ಮೊದಲನೆಯ ಸದಸ್ಯತ್ವವನ್ನು ಪಡೆಯುವ ಮೂಲಕ ಚಾಲನೆ ನೀಡಲಾಯಿತು. ನಂತರ ಸಂಪದನಾ ಶ್ರೀಗಳು ಮಾತನಾಡಿ ಚಿಕ್ಕೋಡಿ ಗಡಿ ಭಾಗದಲ್ಲಿ ಕನ್ನಡ ಇನ್ನೂ ಬೆಳೆಯಬೇಕು. ಕನ್ನಡಿಗರಲ್ಲಿ ಒಗ್ಗಟ್ಟು ಪ್ರದರ್ಶನವಾಗಬೇಕು. ಈ ಭಾಗದ ಎಲ್ಲರೂ ಕರವೇ ಸದಸ್ಯತ್ವ ಪಡೆದು ಕನ್ನಡ ಉಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪ್ರತಾಪ ಪಾಟೀಲ್, ಅಮೂಲ್ ನಾವಿ, ಅನೀಲ್ ನಾವಿ, ಸಚಿನ್ ದೊಡ್ಡಮನಿ, ಶಿವು ಮದಾಳೆ, ಖಾನಪ್ಪಾ ಬಾಡಕರ, ಸತ್ಯಪ್ಪಾ ಕಾಂಬಳೆ, ಸುನೀಲ ಇಂಗಳಿ, ಚನ್ನಪ್ಪಾ ಕುಂಬಾರ, ಸೌರಭಹಿರೇಮಠ, ರಾಖೇಶ ಮಗದುಮ್ಮ, ರುದ್ರಯ್ಯಾ ಹಿರೇಮಠ, ದುಂಡಪ್ಪಾ ಬಡಿಗೇರ, ರಫೀಕ ಪಠಾಣ, ರಮೇಶ ಡಂಗೇರ ಹಾಗೂ ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button