ಪ್ರಗತಿವಾಹಿನಿ ಸುದ್ದಿ; ಕಾರ್ಕಳ: ಕೊರೊನಾ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಊರಿನಿಂದ ಊರಿಗೆ ತೆರಳುತ್ತಿರುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಹೀಗೆ ಲಾಕ್ ಡೌನ್ ಇದ್ದಾಗ್ಯೂ ದಕ್ಷಿಣ ಕನ್ನಡದಿಂದ ಕಾರ್ಕಳಕ್ಕೆ ಹೋಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿ ಮದುವೆಯಾದ ಮೊದಲ ದಿನವೇ ಹೋಂ ಕ್ವಾರಂಟೈನ್ ಗೆ ಒಳಗಾದ ಘಟನೆ ನಡೆದಿದೆ.
ಕಾರ್ಕಳದ ಬೋಳ ಗ್ರಾಮದ ನವ ವಿವಾಹಿತ ಮತ್ತು ಮದುವೆಯಲ್ಲಿ ಭಾಗವಹಿಸಿದ್ದ 26ಮಂದಿಗೆ ಹೋಂ ಕ್ವಾರಂಟೈನ್‍ಗೆ ಹಾಕಲಾಗಿದೆ. ಉಡುಪಿ ಜಿಲ್ಲಾ ಗಡಿ ಸಂಪೂರ್ಣ ಬಂದ್ ಮಾಡಿದ್ದರೂ ಒಳದಾರಿಯಿಂದ ದ.ಕಜಿಲ್ಲೆಯವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಬಂದು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಮಂಗಳೂರನಲ್ಲಿ ಖಾಸಗಿ ಉದ್ಯೋಗಿಯಾಗಿರುವ ವರ ಕಾಪು ತಾಲೂಕು ಕುತ್ಯಾರಿನಲ್ಲಿ ಮದುವೆಯಾಗಿದ್ದ. ಮದುವೆ ಮುಗಿಸಿ ಸಂಜೆ ಮನೆಗೆ ಬಂದ ಮದುಮಗನಿಗೆ ಶಾಕ್ ಕಾದಿತ್ತು. ಆಶಾ ಕಾರ್ಯಕರ್ತೆಯರು ಮನೆ ಬಳಿ ಕಾದು ಕುಳಿತಿದ್ದು, ವರನ ತಪಾಸಣೆ ನಡೆಸಿದಾಗ ವರನಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನನ ದಂಪತಿ ಹಾಗೂ ಮದುವೆಯಲ್ಲಿ ಭಾಗಿಯಾಗಿದ್ದ 26 ಜನರನ್ನು ಕ್ವಾರಂಟೈನ್ ಸೀಲ್ ಹಾಕಿ 28 ದಿನಗಳ ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಮದುವೆಯ ಮೊದಲ ದಿನವೇ ಕ್ವಾರಂಟೈನ್ ಹಾಕಿದ್ದು, ನವಜೋಡಿಗೆ ನಿರಾಶೆಯಾಗಿದೆ.
—————————–
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ