ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲ ದಿನಗಳು ಮಾತ್ರ ಬಾಕಿ ಇದ್ದು, ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯನವರಿಗೆ ವರುಣಾದಿಂದ ಟಿಕೆಟ್ ನೀಡಲಾಗಿದೆ. ಡಿ.ಕೆ.ಶಿವಕುಮಾರ್ ಕನಕಪುರ, ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬೆಳಗಾವಿ ಗ್ರಾಮೀಣ, ಶಾಮನೂರು ಶಿವಶಂಕರಪ್ಪ -ದಾವಣಗೆರೆ ದಕ್ಷಿಣ, ಎಂ.ಬಿ.ಪಾಟೀಲ್ ಗೆ ಬಬಲೇಶ್ವರ ದಿಂದ ಟಿಕೆಟ್ ನೀಡಲಾಗಿದೆ.
ಪ್ರಗತಿವಾಹಿನಿ 4 ದಿನಗಳ ಹಿಂದೆ ಪ್ರಕಟಿಸಿದ್ದ ಪಟ್ಟಿ ನೂರಕ್ಕೆ ನೂರು ನಿಜವಾಗಿದೆ. ಆ ಪಟ್ಟಿಗೆ ಕೆಲವು ಆಕಾಂಕ್ಷಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅದರಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ( https://pragati.taskdun.com/belgaum-latest-information-about-congress-probable-candidates/ )
ಸಿದ್ದರಾಮಯ್ಯ- ವರುಣಾ
ಡಿ.ಕೆ.ಶಿವಕುಮಾರ – ಕನಕಪುರ
ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ
ಸತೀಶ್ ಜಾರಕಿಹೊಳಿ-ಯಮಕನಮರಡಿ
ಅಂಜಲಿ ನಿಂಬಾಳ್ಕರ್-ಖಾನಾಪುರ
ಗಣೇಶ್ ಹುಕ್ಕೇರಿ-ಚಿಕ್ಕೋಡಿ-ಸದಲಗಾ
ಭರಮಗೌಡ ಅಲಗೌಡ (ರಾಜು ಕಾಗೆ)-ಕಾಗವಾಡ
ಮಹಾಂತೇಶ್ ಕೌಜಲಗಿ-ಬೈಲಹೊಂಗಲ
ಅಶೋಕ್ ಪಟ್ಟಣ- ರಾಮದುರ್ಗ
ಎ.ಬಿ.ಪಾಟೀಲ – ಹುಕ್ಕೇರಿ
ಮಹೇಂದ್ರ ತಮ್ಮಣ್ಣವರ್ -ಕುಡಚಿ
ಶಾಮನೂರು ಶಿವಶಂಕರಪ್ಪ -ದಾವಣಗೆರೆ ದಕ್ಷಿಣ
ಎಂ.ಬಿ.ಪಾಟೀಲ್ ಗೆ ಬಬಲೇಶ್ವರ ದಿಂದ ಟಿಕೆಟ್ ನೀಡಲಾಗಿದೆ.
ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ