ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಲ್ ನಾಗರಾಜ್ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯವೇ ನಾಳೆ ಸಂಪೂರ್ಣ್ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.
ನಾಳೆ ಶುಕ್ರವಾರ ಬೆಳಿಗ್ಗೆ 6 ಗಂತೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ, ದಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸೇನೆ, ರೈತ ಸಂಘಟನೆಗಳು, ಕನ್ನಡ ಚಿತ್ರರಂಗ, ಖಾಸಗಿ ಬಸ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘ, ಓಲಾ, ಊಬರ್, ಆಟೋ ಚಾಲಕರ ಸಂಘ, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲಿಸಿವೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಾಳೆ ಏನೆಲ್ಲ ಇರಲ್ಲ, ಏನೆಲ್ಲ ಇರುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಏನಿರಲ್ಲ?
ಓಲಾ, ಊಬರ್ ಸೇವೆಗಳು
ಆಟೋ
ಖಾಸಗಿ ಬಸ್ ಗಳು
ಹೋಟೆಲ್ ಗಳು
ಥಿಯೇಟರ್ ಗಳು
ಮಾಲ್ ಗಳು
ಮಾರುಕಟ್ಟೆಗಳು
ಬೀದಿಬದಿ ವ್ಯಾಪಾರ
ಅಂಗಡಿಗಳು ಬಂದ್ ಆಗಲಿವೆ
ಏನಿರುತ್ತೆ?
ಕೆ.ಎಸ್.ಆರ್.ಟಿ.ಸಿ ಬಸ್
ಬಿಎಂಟಿಸಿ ಬಸ್ ಸೇವೆ
ಮೆಟ್ರೋ
ಆಸ್ಪತ್ರೆ
ಆಂಬುಲೆನ್ಸ್
ಔಷಧಾಲಯಗಳು
ಹಾಲಿನ ಪಾರ್ಲರ್ ಗಳು
ತರಕಾರಿ ಅಂಗಡಿಗಳು ಇರಲಿವೆ
ಇನ್ನು ಮಕ್ಕಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳು ಬಂದ್ ಗೆ ನೈತಿಕ ಬೆಂಬಲವಷ್ಟೇ ಘೋಷಿಸಿದ್ದು, ರಜೆ ನೀಡುವ ಬಗ್ಗೆ ಆಯಾ ಶಾಲೆಗಳು ನಿರ್ಧರ ಕೈಗೊಳ್ಳಲಿವೆ ಎಂದು ತಿಳಿದುಬಂದಿದೆ.
ಕೆ.ಎಸ್.ಆರ್.ಟಿ.ಸಿ ಹಾಗೂ ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಸಿಬ್ಬಂದಿಗಳು ಕಡ್ಡಾಯವಾಗಿ ಸೇವೆಗೆ ಹಾಜರಾಗುವಂತೆ ಸಾರಿಗೆ ನಿಗಮಗಳು ಸೂಚಿವೆ. ಈ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ನಡೆಸಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ