Latest

ಕರ್ನಾಟಕ ಬಂದ್ ; ಸಿಎಂ ಯಡಿಯೂರಪ್ಪ ಮನವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತರ ಅನುಕೂಲಕ್ಕಾಗಿ ಭೂ ಸುಧಾರಣೆ ತಿದ್ದುಪಡಿ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆ ಜಾರಿಗೆ ತರಲಾಗಿದೆ. ಹೀಗಾಗಿ ನಾಳೆ ನಡೆಸಲು ಮುಂದಾಗಿರುವ ಕರ್ನಾಟಕ ಬಂದ್ ಕೈ ಬಿಡುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಯಡಿಯೂರಪ್ಪ, ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಅನುಕೂಲಕ್ಕಾಗಿಯೇ ಕಾಯಿದೆ ಜಾರಿ ಮಾಡಿದ್ದೇವೆ. ಈ ಕಾಯಿದೆಗಳಿಂದ ರೈತರಿಗೆ ಯಾವುದೇ ತೊಂದರೆಯಾಗದು. ಪ್ರತಿಪಕ್ಷಗಳು ಅನಗತ್ಯವಾಗಿ ರೈತರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಮೊನ್ನೆ ರೈತ ನಾಯಕರ ಜೊತೆ ಮಾತನಾಡಿದ್ದೇವೆ. ಎಪಿಎಂಸಿ ತಿದ್ದುಪಡಿ ಕಾಯಿದೆಯನ್ನು ಹಲವು ನಾಯಕರು ಒಪ್ಪಿಕೊಂಡಿದ್ದಾರೆ. ಹೀಗಾಗಿ ರೈತರು ಅನಗತ್ಯವಾಗಿ ಗೊಂದಲಕ್ಕೀಡಾಗುವುದು ಬೇಡ. ನಾಳಿನ ಕರ್ನಾಟಕ ಬಂದ್ ಕೈ ಬಿಡಬೇಕು ಎಂದು ಮನವಿ ಮಾಡಿದರು.

Home add -Advt

Related Articles

Back to top button