
ಪ್ರಗತಿವಾಹಿನಿ ಸುದ್ದಿ: ಮಾರ್ಚ್ 22ರಂದು ಶನಿವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿವೆ. ಸಂಪೂರ್ಣ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ.
ಕನ್ನಡಿಗರ ಮೇಲೆ ಹಲ್ಲೆ, ಪರಭಾಷಿಕರಿಂದ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ವಿವಿಧ ಭೇಡಿಕೆ ಮುಂದಿಟ್ಟು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಕೆಲ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಕೊಡುತ್ತೇವೆ. ಆದರೆ ಬಂದ್ ಗೆ ಬೆಂಬಲ ನೀಡಲ್ಲ ಎಂದಿದ್ದಾರೆ. ಖಾಸಗಿ ಶಾಲೆಗಳ ಒಕ್ಕೂಟ ಬಂದ್ ಗೆ ಬೆಂಬಲ ನೀಡಿಲ್ಲ. ಇದು ಪರೀಕ್ಷಾ ಸಮಯವಾಗಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಬಂದ್ ಸರಿಯಲ್ಲ ಎಂದು ತಿಳಿಸಿದೆ.
ಕರ್ನಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಬಂದ್ ಗೆ ಬೆಂಬಲ ವಿಲ್ಲ. ಆದರೆ ಹೋರಾಟ, ಪ್ರತಿಭಟನೆಯನ್ನು ಬೆಂಬಲಿಇಸುತ್ತೇವೆ ಎಂದಿದೆ. ಇನ್ನು ಹೊಟೆಲ್ ಮಾಲೀಕರ ಸಂಘ ಬಂದ್ ಬೆಂಬಲವಿಲ್ಲ ಎಂದು ತಿಳಿಸಿದೆ.
ಹೋರಾಟಕ್ಕೆ ನೈತಿಕವಾಗಿ ಬೆಂಬಲ ಘೋಷಿಸುತ್ತೇವೆ. ಆದರೆ ಹೋಟೆಲ್ ಬಂದ್ ಇರಲ್ಲ. ಕಾರಣ ಆಹಾರ ಎಲ್ಲರಿಗೂ ಅಗತ್ಯ ಹೋಟೆಲ್ ಬಂದ್ ಮಾಡಿದರೆ ಎಲ್ಲರಿಗೂ ತೊಂದರೆ ಆಗುತ್ತದೆ. ಅಲ್ಲದೇ ವ್ಯಾಪಾರಕ್ಕೂ ನಷ್ಟವಾಗುತ್ತದೆ. ಹಾಗಾಗಿ ಹೋಟೆಲ್ ಬಂದ್ ಇರಲ್ಲ ಎಂದು ತಿಳಿಸಿದೆ.