Karnataka News

*ನಾಳೆ ಕರ್ನಾಟಕ ಬಂದ್: ಅನುಮಾನವೇ ಇಲ್ಲ ಎಂದ ವಾಟಾಳ್ ನಾಗರಾಜ್*

ಪ್ರಗತಿವಾಹಿನಿ ಸುದ್ದಿ: ಎಂಇಎಸ್, ಶಿವಸೇನೆ ಪುಂಡರ ಅಟ್ಟಹಾಸ ಖಂಡಿಸಿ, ಕನ್ನಡಿಗರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ, ನೆಲ, ಜಲ, ಭಾಷೆ ನಿಟ್ಟಿನಲ್ಲಿ ನಳೆ ಅಖಂಡ ಕರ್ನಾಟಕ ಬಂದ್ ಕರೆ ನಿಡಲಾಗಿದೆ.

ಈ ಬಗ್ಗೆ ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ನಾಳೆ ಕರ್ನಾಟಕ ಬಂದ್ ಆಗಿಯೇ ಆಗುತ್ತೆ. ಅನುಮಾನವಿಲ್ಲ. ನಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಕರ್ನಾಟಕ ಬಂದ್ ಎಂದು ಹೇಳಿದರು.

ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ನೆಲ, ಜಲ, ಭಾಷೆರಕ್ಷಣೆಗಾಗಿ ಒಕ್ಕೋರಲಿನಿಂದ ಬಂದ್ ಗೆ ಬೆಂಬಲ ನೀಡಬೇಕು. ಎಲ್ಲಾ ಸಂಘ-ಸಂಸ್ಥೆಗಳು, ಚಿತ್ರರಂಗ, ಸಾರಿಗೆ, ಸಂಘಟನೆಗಳು, ಎಪಿಎಂಸಿ, ಮಾರುಕಟ್ಟೆ, ಕಾರ್ಮಿಕ ಪರಿಷತ್ ಬಂದ್ ಗೆ ಬೆಂಬಲ ನೀಡಿವೆ. ತುರ್ತು ಸೇವೆ, ಮೆಡಿಕಲ್ ಶಾಪ್ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿವೆ ಎಂದರು.

Home add -Advt

Related Articles

Back to top button