Latest

*ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ ಇರುವ ಕರ್ನಾಟಕ ಬ್ಯಾಂಕ್ ಶಾಖೆಗಳಲ್ಲಿ ಸ್ಕೇಲ್ 1 ಅಧಿಕಾರಿ ಹುದ್ದೆಗೆ ನೇಮಕಾತಿ ಆರಂಭಿಸಲಾಗಿದೆ.

ಇಂದಿನಿಂದಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಜನವರಿ 10-2023.

ವಿದ್ಯಾರ್ಹತೆ: ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (ಭಾರತ ಸರ್ಕಾರದಿದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ/ಸಂಸ್ಥೆ/ಮಂದಳಿ/ಯುಜಿಸಿ ಇತರ ಸರ್ಕಾರಿ ನಿಯಂತ್ರಕ ಸಂಸ್ಥೆಗಳು) ಪಡೆದವರು ಅರ್ಜಿ ಸಲ್ಲಿಸಬಹುದು. ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅಥವಾ ಸ್ನಾತಕೋತ್ತರ ಪದವಿ ಪಡೆಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಆಯ್ಕೆ: ಫೆಬ್ರವರಿ 2023ರಲ್ಲಿ ಬೆಂಗಳೂರು, ಚೆನ್ನೈ,ಹುಬ್ಬಳ್ಳಿ/ಧಾರವಾಡ, ಹೈದರಾಬಾದ್, ಮಂಗಳೂರು, ಮುಂಬೈ, ಮೈಸೂರು, ನವದೆಹಲಿ ಹಾಗೂ ಶಿವಮೊಗ್ಗ ಕೇಂದ್ರಗಳಲ್ಲಿ ಆನ್ ಲೈನ್ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಗದಿ ಪಡಿಸಲಾಗಿದೆ. ಆನ್ ಲೈನ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು ಅಥವಾ ಬ್ಯಾಂಕ್ ನಿರ್ಧರಿಸಿದ ಯಾವುದೇ ಸ್ಥಳದಲ್ಲಿ ಸಂದರ್ಶನ ಕರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ

Home add -Advt

http://Karnataka Bank Recruitment 2023

Related Articles

Back to top button