Film & EntertainmentKannada NewsKarnataka NewsLatest

*ಫಿಲ್ಮ್ ಚೇಂಬರ್ ಚುನಾವಣೆ: ಫಲಿತಾಂಶ ಪ್ರಕಟ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾಗಿ ಎನ್.ಎಂ. ಸುರೇಶ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿ ಆಗಿ ಬಾ.ಮಾ ಗಿರೀಶ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಜಯಸಿಂಹ ಮಸೂರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮಿಳಾ ಜೋಶಾಯಿ ಆಯ್ಕೆ ಆಗಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ 2023:
ಒಟ್ಟು ಮತಗಳು 1599
ಚಲಾವಣೆ ಆದ ಮತಗಳು 967

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರು ಪಡೆದ ಮತಗಳು

ಶಿಲ್ಪಾ ಶ್ರೀನಿವಾಸ್ 217

ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181

ಎನ್.ಎಮ್ ಸುರೇಶ್ 337ತಿಹೆಚ್ಚು ಮತಗಳು

ಎ.ಗಣೇಶ್ 204

ಎನ್.ಎಮ್. ಸುರೇಶ್ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಗೆಲುವಿನ ನಂತರ ಅಧ್ಯಕ್ಷ ಸ್ಥಾನದ ವಿಜೇತ ಅಭ್ಯರ್ಥಿ ಎನ್ ಎಂ ಸುರೇಶ್ ಮಾತು

ಇದು ವಾಣಿಜ್ಯ ಮಂಡಳಿಯ ಚರಿತ್ರೆಯಲ್ಲಿ ಬರೆಯೋ ಚುನಾವಣೆ

ನಾನು ನಾಲ್ಕು ಅಭ್ಯರ್ಥಿಗಳ ಮಧ್ಯೆ ಹೆಚ್ಚು ಮತ ಪಡೆಯೋಕೆ ಕಾರಣ ನನ್ನ ಗುರುಗಳಾದ ಸಾರಾ ಗೋವಿಂದು ಅವರು

ಅವ್ರ ಮಾರ್ಗದರ್ಶನದಲ್ಲಿ ಗೆದ್ದಿದ್ದೀನಿ ಅವ್ರಿಗೆ ಭಾರಿ ಸಂತೋಷವಾಗಿದೆ

ಕಾವೇರಿ ವಿಚಾರವಾಗಿ ಮಾತು

ಈಗ ತಾನೇ ಗೆದ್ದು ಆಯ್ಕೆ ಆಗಿದ್ದೇನೆ ಸಂತೋಷವಾಗಿದೆ ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗ ಎಂದಿಗೂ ರೈತರ ಪರ ಅವ್ರಿಗೆ ಸಪೋರ್ಟ್ ಮಾಡಿಲ್ಲ ಅಂದ್ರೆ ನಮ್ಮ ಜನ್ಮ ಸಾರ್ಥಕವಾಗಲ್ಲ

ನಾಳೆ ಮೊದಲ ಮೀಟಿಂಗ್ ಕಾವೇರಿ ವಿಚಾರವಾಗಿ ಮಾಜಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತಿನಿ

ನನ್ನ ಗೆಲುವಿಗೆ ಕಾರಣವಾದ ಎಲ್ಲಾ ನಿರ್ಮಾಪಕರಿಗೆ ವಿತರಕರಿಗೆ ಹಾಗೂ ಪ್ರದರ್ಶಕರಿಗೆ ಧನ್ಯವಾದಗಳು ನನಗೆ ತುಂಬಾ ಖುಷಿಯಾಗಿದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button