Kannada NewsLatest

ಶಿವಸೇನೆ ಬಳಿಕ MNS ಪುಂಡಾಟ; KSRTC ಬಸ್ ಗಳ ಮೇಲೆ ದಾಳಿ

ಪ್ರಗತಿವಾಹಿನಿ ಸುದ್ದಿ; ಪುಣೆ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇನ್ನಷ್ಟು ತಾರಕಕ್ಕೇರಿದ್ದು, ಶಿವಸೇನೆ ಉದ್ಧಟತನದ ಬಳಿಕ ಇದೀಗ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಕರ್ನಾಟಕ ಬಸ್ ಗಳ ಮೇಲೆ ಪುಂಡಾಟ ಮೆರೆದಿದ್ದಾರೆ.

ಪುಣೆಯಿಂದ ಬೆಳಗಾವಿಗೆ ಬರುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಗಳನ್ನು ಸಿಂಧದುರ್ಗ ಬಳಿ ತಡೆದು ನಿಲ್ಲಿಸಿದ ರಾಜ್ ಠಾಕ್ರೆ ನೇತೃತ್ವದ ಎಮ್ ಎನ್ ಎಸ್ ಬಣ, ಕೆ ಎಸ್ ಆರ್ ಟಿಸಿ ಬಸ್ ಗಳ ಮೇಲೆ ಮಸಿ ಬಳಿದು ಪುಂಡಾಟ ಮೆರೆದಿದ್ದಾರೆ.

ಅಲ್ಲದೇ ಪುಣೆ ಡಿಪೋಗೆ ನುಗ್ಗಿದ ಎಂಎನ್ ಎಸ್ ಹಾಗೂ ಶಿವಸೇನೆ ಕಾರ್ಯಕರ್ತರು, ಬಸ್ ಗಳಿಗೆ ಕೇಸರಿ ಹಾಗೂ ಕಪ್ಪು ಬಣ್ಣ ಬಳಿದು, ಜೈ ಮಹಾರಾಷ್ಟ್ರ ಘೋಷಣೆಗಳನ್ನು ಕೂಗಿದ್ದಾರೆ.

ಕರವೇ ಕಾರ್ಯಕರ್ತರ ವಿರುದ್ಧ FIR ದಾಖಲು

Home add -Advt

 

https://pragati.taskdun.com/karnataka-maharastra-border-issuekaravefirhirebagewadi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button