Belagavi NewsBelgaum NewsKarnataka News

*ಹೊಲಿಗೆ ಯಂತ್ರ ವಿತರಣಾ ಯೋಜನೆ: ಅರ್ಜಿ ಅವಧಿ ವಿಸ್ತರಣೆ*

ಪ್ರಗತಿವಾಹಿನಿ ಸುದ್ದಿ: ೨೦೨೫-೨೬ನೇ ಸಾಲಿನ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಈಗಾಗಲೆ ಸೌಲಭ್ಯವನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಅವದಿಯನ್ನು ಡಿಸೆಂಬರ, ೨೭, ೨೦೨೫ರವರೆಗೆ ವಿಸ್ತರಿಸಲಾಗಿದೆ.


ಈ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರವರ್ಗ-೩-ಬಿ ಅಡಿಯಲ್ಲಿ ೨(ಎ) ಯಿಂದ ೨(ಎಫ್)ವರೆಗೆ ಬರುವ ಸಮುದಾಯಕ್ಕೆ ಸೇರಿರಬೇಕು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-೩ಬಿ ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು), ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು. ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.


ಆಧಾರ್ ಕಾರ್ಡ್ ಹೊಂದಿರಬೇಕು, ಅರ್ಜಿದಾರರ ವಯಸ್ಸು ಕನಿಷ್ಠ ೧೮ ವರ್ಷಗಳು ಹಾಗೂ ಗರಿಷ್ಠ ೫೫ ವರ್ಷಗಳನ್ನು ಮೀರಿರತಕ್ಕದ್ದಲ್ಲ, ಒಂದು ಕುಟುಂಬದಲ್ಲಿ ಓರ್ವ ಸದಸ್ಯರನ್ನು ಮಾತ್ರ ಈ ಸೌಲಭ್ಯಕ್ಕೆ ಪರಿಗಣಿಸತಕ್ಕದ್ದು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. ೯೮.೦೦೦ ಹಾಗೂ ನಗರ ಪ್ರದೇಶದಲ್ಲಿ ರೂ.೧,೨೦.೦೦೦ ಗಳನ್ನು ಮೀರತಕ್ಕದ್ದಲ್ಲ, ಅಂಗವಿಕಲ ಮಹಿಳೆಯರಿಗೆ ಶೇ.೫ ರಷ್ಟು ಮೀಸಲಿರಿಸತಕ್ಕದ್ದು, ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.೩೩ ರಷ್ಟು, ವಿಕಲಚೇತನರಿಗೆ ಶೇ.೫ರಷ್ಟು ಹಾಗೂ ತೃತೀಯ ಲಿಂಗಳಿಗೆ ಶೇ.೧ ರಷ್ಟು ಅಂಗವಿಕಲ ಮಹಿಳೆಯರಿಗೆ ಶೇ.೨ ರಷ್ಟನ್ನು ಮೀಸಲಿರಿಸುವುದು, ವಿಧವೆಯರಿಗೆ, ಪರಿತ್ಯಕ್ತ ಮಹಿಳೆಯರಿಗೆ ಹೆಚ್.ಐ.ವಿ ಪೀಡಿತರಿಗೆ ೩೫ ವರ್ಷ ವಯೋಮಿತಿ ಮೀರಿರತಕ್ಕ ಅವಿವಾಹಿತ ಮಹಿಳೆಯರಿಗೆ ಶೇ.೨ ರಷ್ಟನ್ನು ಮೀಸಲಿರಿಸುವುದು.

Home add -Advt


ಯೋಜನೆಗೆ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಳಗಾವಿ ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ https://kmcdc.karnataka.gov.in ನ್ನು ಅಥವಾ ನಿಗಮದ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ:೦೮೩೧-೨೪೦೨೧೬೩, ೮೮೬೭೫೩೭೭೯೯, ೦೮೦-೨೯೯೦೩೯೯೪ ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ (ನಿ) ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button