Advertisement -Home Add

ಪೌರ ಕಾರ್ಮಿಕನ ಸಂಕಷ್ಟಕ್ಕೆ ಮಿಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪೌರ ಕಾರ್ಮಿಕನ ಕುಟುಂಬಕ್ಕೆ  10 ಲಕ್ಷ ರೂ. ಪರಿಹಾರ ನೀಡಿ

ಪೌರ ಕಾರ್ಮಿಕನ ಕುಟುಂಬಕ್ಕೆ  10 ಲಕ್ಷ ರೂ. ಪರಿಹಾರ ನೀಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಲಸದ ವೇಳೆ ವಾಹನದಿಂದ ಬಿದ್ದು ಮೃತನಾದ ಪೌರ ಕಾರ್ಮಿಕನ ಕುಟುಂಬಕ್ಕೆ ತಕ್ಷಣ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿಯಲ್ಲಿ ಇಂದು ಧರಣಿ ನಡೆಸಿದರು. 
ಪೌರ ಕಾರ್ಮಿಕರು, ಕಟುಂಬಸ್ಥರು ಹಾಗೂ ಅಪಾರ ಸಾರ್ವಜನಿಕರೊಂದಿಗೆ ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಸರಕಾರ ಹಾಗೂ ಮಹಾನಗರ ಪಾಲಿಕೆಯ ನೀತಿಯ ವಿರುದ್ಧ ತೀವ್ರ ಕಿಡಿಕಾರಿದರು.

 

ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗಣೇಶಪುರದ ನಿವಾಸಿ ಪೌರ ಕಾರ್ಮಿಕ  ಜಿತೇಂದ್ರ ದುಸ್ಥಿತಿಯಲ್ಲಿದ್ದ, ತುಕ್ಕು ಹಿಡಿದ ಹಾಗು ಇನ್ಸೂರನ್ಸ್ ಇಲ್ಲದ ವಾಹನದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಿಜಕ್ಕೂ ದುರದೃಷ್ಟಕರ. ಮೃತರ ಕುಟುಂಬವು ಇವರ ದುಡಿಮೆಯ ಮೇಲೆ ಅವಲಂಬಿತವಾಗಿತ್ತು. ಈಗ ಮನೆಯವರ ಪರಿಸ್ಥಿತಿ ಚಿಂತಾಜನಕವಾಗಿದೆ. ಒಂದು ಕಡೆ ಅಗಲಿಕೆಯ ನೋವು. ಇನ್ನೊಂದು ಕಡೆ ತೀವ್ರವಾದ ಬಡತ. ಕೂಡಲೇ ಪೌರ ಕಾರ್ಮಿಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನ್ಯಾಯಯುತವಾದ ಕೆಲಸಕ್ಕೆ ನೂರೆಂಟು ಕಾನೂನು, ಪ್ರಶ್ನೆ ಕೇಳುವ ಅಧಿಕಾರಿಗಳು, ದುರಸ್ಥಿಯಲ್ಲಿಲ್ಲದ ವಾಹನ ಬಳಸಿ, ಇನ್ಸೂರನ್ಸ್ ನ್ನು ಕೂಡ ಮಾಡಿಸದೆ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಗೆ ಯಾವ ಆಧಾರದ ಮೇಲೆ ಗುತ್ತಿಗೆ ನೀಡಲಾಗಿದೆ ಎಂದು ಪ್ರಶ್ನಿಸಿದರು.   
 
 ಕೊರೋನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲೂ ಪೌರ ಕಾರ್ಮಿಕರು ತಮ್ಮ ಜೀವಗಳನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಪೌರಕಾರ್ಮಿಕ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಹಾಗೂ ಬೇಜವಾಬ್ದಾರಿಯಿಂದ ಪೌರಕಾರ್ಮಿಕರು ಮೃತಪಟ್ಟಾಗ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು? ದುರಸ್ತಿ ಅಗತ್ಯವಿರುವ, ಬ್ರೇಕ್ ಇಲ್ಲದ ವಾಹನ ನೀಡಿ ಪೌರಕಾರ್ಮಿಕನ ಸಾವಿಗೆ ಕಾರಣರಾದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ತಾವು ಮಾತ್ರ ಸೋಂಪಾಗಿ ಎಲ್ಲ ವ್ಯವಸ್ಥೆ ಮಾಡಿಕೊಂಡು ಪೌರ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಳ್ಳಬೇಕು. ಪೌರ ಕಾರ್ಮಿಕನ ಕುಟುಂಬಕ್ಕೆ ಕೂಡಲೆ 10 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದರು.