GIT add 2024-1
Laxmi Tai add
Beereshwara 33

ಲಕ್ಷ್ಮಿ, ಜ್ಯೋತಿಬಾ ದರ್ಶನ ಪಡೆದ ಹೆಬ್ಬಾಳಕರ್ ಕುಟುಂಬ

ಮಂಗಲ ಕಾರ್ಯದ ನಂತರ ಮನೆ ದೇವರು ಮತ್ತು ಇನ್ನಿತರ ಆರಾಧ್ಯ ದೇವರ ದರ್ಶನ ಪಡೆಯುವ ಸಂಪ್ರದಾಯ

Anvekar 3
Cancer Hospital 2
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪುತ್ರ ಮೃಣಾಲ​ ಹೆಬ್ಬಾಳಕರ್​ ವಿವಾಹದ ಹಿ​ನ್ನೆಲೆಯಲ್ಲಿ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕುಟುಂಬದ ಸದಸ್ಯರು ಸೋಮವಾರ ಮನೆಯ ಆರಾಧ್ಯದೈವ ಶ್ರೀ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ​ ಸಲ್ಲಿಸಿದರು.
Emergency Service
​ ನೂತನ ದಂಪತಿ ಜೊತೆಗೆ ಎರಡೂ ಕುಟುಂಬದ ಸದಸ್ಯರು ಸಂಪ್ರದಾಯದ ಪ್ರಕಾರ ಜ್ಯೋತಿಬಾ ಮತ್ತು ಕೊಲ್ಹಾಪುರ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿದಿಗೆ ತೆರಳಿ​ ಪೂಜೆ ಹಾಗೂ ಅಭಿಷೇಕ ನೆರವೇರಿಸಿದರು.
​ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ​ಮೃಣಾಲ ಹೆಬ್ಬಾಳಕರ್ ಮತ್ತು ಭದ್ರಾವತಿ ಶಾಸಕ ಸಂಗಮೇಶ್ ಅವರ ಸಹೋದರ ಬಿ.ಕೆ.ಶಿವಕುಮಾರ ಅವರ ಪುತ್ರಿ ಡಾ.ಹಿತಾ ವಿವಾಹ ನ.27ರಂದು ನೆರವೇರಿರುವುದನ್ನು ಇಲ್ಲಿ ಸ್ಮರಿಸಬಹುದು. 
​ ಮಂಗಲ ಕಾರ್ಯದ ನಂತರ ಮನೆ ದೇವರು ಮತ್ತು ಇನ್ನಿತರ ಆರಾಧ್ಯ ದೇವರ ದರ್ಶನ ಪಡೆಯುವ ಸಂಪ್ರದಾಯವನ್ನು ನವದಂಪತಿ ಹಾಗೂ ಕುಟುಂಬ ಸದಸ್ಯರು ನೆರವೇರಿಸಿದರು. 
Bottom Add3
Bottom Ad 2