ಪ್ರಗತಿವಾಹಿನಿ ಸುದ್ದಿ ಭೋಪಾಲ್, ಇಂದು ಗಣಿ ಬ್ಲಾಕ್ ಗಳ ಹರಾಜಿನಲ್ಲಿ ಕರ್ನಾಟಕ ಸೇರಿದಂತೆ ಒಡಿಶಾ, ಮಧ್ಯಪ್ರದೇಶದಂತಹ ಹಲವು ರಾಜ್ಯಗಳು ಉತ್ತಮ ಪ್ರದರ್ಶನ ನೀಡುತ್ತಿವೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಭೋಪಾಲ್ ನಲ್ಲಿ ಇಂದು ಗಣಿ ರಾಜ್ಯ ಸಚಿವರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇನ್ನೂ ಹಲವು ರಾಜ್ಯಗಳಲ್ಲಿ ಗಣಿ ಬ್ಲಾಕ್ ಗಳ ಹರಾಜು ನಡೆಯುತ್ತಿಲ್ಲ. ಅಂಥ ರಾಜ್ಯಗಳು ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಕ್ಕೆ ತಂದರೆ ಪರಿಹಾರ ಕಲ್ಪಿಸಲಾಗುತ್ತದೆ ಎಂದರು.
ಸ್ವಾತಂತ್ರ್ಯಾ ನಂತರದಲ್ಲಿ ರಾಜ್ಯಗಳಿಗೆ ಗಣಿಗಾರಿಕೆ ಸಚಿವಾಲಯದಿಂದ ಈಗಿನಷ್ಟು ಬೆಂಬಲ ಸಿಕ್ಕಿರಲಿಲ್ಲ. ಆದರೆ ಈಗ ಗಣಿ ನೀತಿಗಳಲ್ಲಿ ಸುಧಾರಣೆ ತರುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆರ್ಥಿಕತೆಯಲ್ಲಿ ವಿಶ್ವದಲ್ಲೇ 3ನೇ ಸ್ಥಾನದ ಹಾದಿಯಲ್ಲಿದೆ ಭಾರತ:
ಭಾರತ ಆರ್ಥಿಕತೆಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದ ಹಾದಿಯಲ್ಲಿದೆ. ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರವಾಗಿ ಮಾರ್ಪಟ್ಟಿರುವ ಭಾರತ ಶೀಘ್ರದಲ್ಲೇ ಮೂರನೇ ಸ್ಥಾನಕ್ಕೇರಲಿದೆ ಎಂದರು.
ದೇಶದ ಆರ್ಥಿಕ ಪ್ರಗತಿಯಲ್ಲಿ ಗಣಿಗಾರಿಕೆಯದ್ದು ಪ್ರಮುಖ ಪಾತ್ರವಿದೆ ಎಂದು ಪ್ರತಿಪಾದಿಸಿದರು
ಭಾರತವನ್ನು ಆರ್ಥಿಕ ದುರ್ಬಲ ರಾಷ್ಟ್ರವೆಂದು ಪರಿಗಣಿಸಲಾಗಿತ್ತು. ಆದರೆ ಇತ್ತೀಚಿನ 10 ವರ್ಷಗಳಲ್ಲಿ ನಾವು ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸಿದ್ದೇವೆ ಎಂದು ಹೇಳಿದರು.
ಭಾರತಕ್ಕೆ ಈಗ ಪ್ರಮುಖವಾಗಿ ಬೇಕಿರುವುದು ಉದ್ಯೋಗ. ಕೊರೋನಾದ ನಂತರ ವಿಶ್ವ ಕ್ರಮ ಬದಲಾಗುತ್ತಿದೆ. 21ನೇ ಶತಮಾನದಲ್ಲಿ ಭಾರತ ಮುಂಚೂಣಿಯಲ್ಲಿರುತ್ತದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ