
ಪ್ರಗತಿವಾಹಿನಿ ಸುದ್ದಿ: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನದ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ವಿಧಾನಸಭೆಯ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಜನವರಿ22ರಿಂದ ಆರಂಭವಾಗಿದ್ದ ವಿಧಾನ ಮಂಡಲ ವಿಶೇಷ ಜಂಟಿ ಅಧಿವೇಶನ ಜನವರಿ 31ರವರೆಗೆ ನಿಗದಿಯಾಗಿತ್ತು. ಆದರೆ ಕೆಲ ಕಾರಣಗಳಿಂದ ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ.
ಶನಿವಾರ ವಿಧಾನಮಂಡಲ ಜಂಟಿ ಅಧಿವೇಶನ ಇರುವುದಿಲ್ಲ. ಅಲ್ಲದೇ ಅಧಿವೇಶನದಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಇನ್ನೂ ಬಾಕಿ ಇವೆ. ಈ ಕಾರಣಗಳಿಂದ ಜಂಟಿ ಅಧಿವೇಶನವನ್ನು ಫೆಬ್ರವರಿ 4ರವರೆಗೂ ವಿಸ್ತರಿಸಲಾಗಿದೆ.


