Latest

ಸರಕಾರಿ ನೌಕರರಿಗೆ ಸಿಹಿ ಸುದ್ದಿ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ  ಸರಕಾರ ತನ್ನ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಸರಕಾರಿ ನೌಕರರು ತಮ್ಮ ಆಸ್ತಿ ವಿವರವನ್ನುಡಿಸೆಂಬರ್ ಅಂತ್ಯದ ಬದಲಿಗೆ ಮಾರ್ಚ್ ಅಂತ್ಯದವರೆಗೆ ಸಲ್ಲಿಸಲು ಸರಕಾರ ಅವಕಾಶ ನೀಡಿದೆ. ಇದರಿಂದ ವರ್ಷಾಂತ್ಯಕ್ಕೆ ಕೆಲಸಗಳ ಒತ್ತಡದ ಮಧ್ಯೆ ಆಸ್ತಿ ವಿವರ ಸಲ್ಲಿಕೆಯ ಧಾವಂತದ ಭಾರ ಇಳಿದಂತಾಗಿದೆ.

ಮಾರ್ಚ್ ಅಂತ್ಯಕ್ಕೆ ಆದಾಯ ತೆರಿಗೆ ಪಾವತಿಯ ಆರ್ಥಿಕ ವರ್ಷ ಅಂತ್ಯಗೊಳ್ಳುವುದಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಸರಕಾರ ಈ ಅವಕಾಶ ಕಲ್ಪಿಸಿದೆ. ಇದು ಆಸ್ತಿ ವಿವರಗಳ ದಾಖಲೆಗಳ ಸಂಗ್ರಹಕ್ಕೆ ಅನುಕೂಲಕರವಾಗಲಿದೆ.

ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸರಕಾರಿ ನೌಕರರು ಈ ಮೊದಲು ಡಿಸೆಂಬರ್ ಅಂತ್ಯಕ್ಕೆ ತಮ್ಮ ಹಾಗೂ ಕುಟುಂಬದ ಆಸ್ತಿ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು. ಇದಕ್ಕಾಗಿ ಎಲ್ಲ ದಾಖಲೆಗಳನ್ನು ಕ್ರೋಢೀಕರಿಸಬೇಕಿತ್ತು.

ಇದಾಗುತ್ತಲೇ ಮಾರ್ಚ್- ಏಪ್ರಿಲ್ ನಲ್ಲಿ ಆದಾಯ ತೆರಿಗೆ ಹಾಗೂ ಬ್ಯಾಂಕ್ ಗಳಿಗೆ ಸಲ್ಲಿಸಲು ಮತ್ತೊಮ್ಮೆ ಎಲ್ಲ ಆಸ್ತಿ ದಾಖಲೆ ಸಂಗ್ರಹಿಸಬೇಕಿತ್ತು. ಇದು ಅನಗತ್ಯ ಸಮಯ, ಹಣ ಹಾಗೂ ಪರಿಶ್ರಮದ ನಷ್ಟಕ್ಕೆ ಕಾರಣವಾಗುವುದರಿಂದ ಒಂದೇ ಬಾರಿ ಎಲ್ಲದಕ್ಕೂ ಅನುಕೂಲಕರವಾಗುವ ನಿಟ್ಟಿನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

“ಗಡ್ಡ ಬಿಟ್ಟಿದ್ದೇ ತಪ್ಪಾಯ್ತು” ಎಂದ ರಣಬೀರ್ ಕಪೂರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button