೧೯೫೬ ನೇ ಇಸ್ವಿ ನವ್ಹೆಂಬರ್ ಒಂದರಂದು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಬಹುತೇಕ ಕನ್ನಡ ಪ್ರದೇಶಗಳು ಒಂದುಗೂಡಿ ವಿಶಾಲ ಮೈಸೂರಾಗಿ ರೂಪಗೊಂಡು ಕರ್ನಾಟಕ ಏಕೀಕರಣ ಕನಸು ನನಸಾದ ದಿನ.
ಅದು ವಿಶಾಲ ಮೈಸೂರೆಂದೇ ಆರಂಭಗೊಂಡ ಈ ಪ್ರದೇಶ ಕರ್ನಾಟಕ ಎಂಬ ಮೂಲನಾಮವನ್ನು ಪಡೆಯಲು ಒಂದು ದಶಕಕ್ಕೂ ಹೆಚ್ಚು ಕಾಲ ತೆಗೆದುಕೊಂಡ ರಾಜಕೀಯ ಇತಿಹಾಸವೇ ಬೇರೆ.
ಕನ್ನಡ ಕುಲಕೋಟಿಯ ಬಹುದಿನಗಳ ಆಸೆ ೦೧/೧೧/೧೯೭೩ ರಂದು ನನಸಾಯಿತು. ಕನ್ನಡಿಗರು ಈ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಬೇಕು ಎಂದು ಬಯಸಿ ಚಳುವಳಿ ನಡೆಸಿದರು. ಜನರ ಈ ಬಯಕೆಯನ್ನು ಅರಿತು ನಮ್ಮ ಸರಕಾರವು ಮನ್ನಣೆ ಕೊಟ್ಟು ಕರ್ನಾಟಕವೆಂದು ಪುನರ್ ನಾಮಕರಣ ಮಾಡಿತು. ಜನತೆ ಬಹು ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ದಿನವನ್ನು ಆಚರಿಸುತ್ತ ಬರುತ್ತಿದೆ.
ಕರ್ನಾಟಕಕ್ಕೆ ಸುಮಾರು ೨೦೦೦ ವರ್ಷಗಳ ಸುದೀರ್ಘವಾದ ಇತಿಹಾಸವಿದೆ. ಕ್ರಿ.ಪೂ ಮೂರನೇ ಶತಮಾನದಲ್ಲಿ ಕರ್ನಾಟಕದ ಕೆಲವು ಭಾಗಗಳು ಮೌರ್ಯ ಸಾಮ್ರಾಜ್ಯ ಅಶೋಕನ ಆಳ್ವಿಕೆಗೆ ಒಳಪಟ್ಟಿದ್ದವು. ಆ ಬಳಿಕ ಶಾತವಾಹನರು ಕಂಚಿಯ ಪಲ್ಲವರು ಇಲ್ಲಿನ ಕೆಲವು ಭಾಗಗಳ ಮೇಲೆ ಆಳ್ವಿಕೆ ನಡೆಸಿದ್ದರು. ಕರ್ನಾಟಕವನ್ನು ಮೊದಲು ಆಳಿದ ಕನ್ನಡಿಗ ದೊರೆಗಳು ಕದಂಬರು ಆನಂತರ ತಲಕಾಡಿನ ಗಂಗರು, (ಕ್ರಿ.ಶ. ೩೨೫ ರಿಂದ ೧೦೦೦) ಬಾದಾಮಿ ಚಾಲುಕ್ಯರು( ಕ್ರಿ.ಶ ೫೦೦-೭೫೦) ರಾಷ್ಟ್ರಕೂಟರು (ಕ್ರಿ.ಶ. ೭೫೦-೯೮೦) ಕಲ್ಯಾಣದ ಚಾಲುಕ್ಯರು (ಕ್ರಿ.ಶ ೯೭೦-೧೨೦೦) ಹೊಯ್ಸಳರು ಕ್ರಿ.ಶ. ೧೨-೧೩ ಶತಮಾನ ವಿಜಯನಗರದ ಅರಸರು ಕ್ರಿ.ಶ ೧೩೩೬-೧೫೬೫) ಬಹುಮನಿ ಸುಲ್ತಾನರು, ಕೆಳದಿ ಅರಸರು ಹೈದರಾಲಿ ಟಿಪ್ಪು ಸುಲ್ತಾನ್ ಹಾಗೂ ಮೈಸೂರು ಅರಸರು ( ೧೩೯೯-೧೯೪೭ ಶ್ರೀಗಂಧದನಾಡು, ಕವಿಗಳಬೀಡು, ಸಂಸ್ಕೃತಿಯ ಗೂಡು ಅದುವೇ ನಮ್ಮ ಕನ್ನಡ ನಾಡು. ಸುಂದರವಾದ ಈ ನಾಡನ್ನು ಆದಿ ಗ್ರಂಥವಾದ ಕವಿರಾಜ ಮಾರ್ಗ ದಲ್ಲಿ ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡ ದೊಳ್ ಕನ್ನಡ ನಾಡಿನ ವಿಸ್ತೀರ್ಣವನ್ನು ವರ್ಣಿಸುತ್ತದೆ. ಆದರೆ ಇಂದು ನಮ್ಮ ಕರ್ನಾಟಕದ ವಿಸ್ತೀರ್ಣವು ಸುಮಾರು ೧,೯೧,೭೯೧, ಚ.ಕಿ.ಮೀ ಗಳನ್ನು ಹೊಂದಿದೆ. ಹಾಗೂ ಸ್ವಂತಂತ್ರ್ಯ ಭಾರತದ ೩೦ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿ ಇದು ಭಾರತದ ದಕ್ಷಿಣ ದಿಕ್ಕಿನಲ್ಲಿದೆ. ಕರ್ನಾಟಕದ ವಾಪ್ತಿಯು ಉತ್ತರ – ದಕ್ಷಿಣವಾಗಿ ೭೭೦ ಕಿ.ಮೀಗಳು ಪೂರ್ವ – ಪಶ್ಚಿಮವಾಗಿ ೪೪೦ ಕಿ,ಮೀ ಗಳವರೆಗೆ ವಿಸ್ತರಿಸಿದೆ.
ಕರ್ನಾಟಕ ಸುತ್ತ ನೋಡಿದಾಗ ವಾಯವ್ಯ ಮತ್ತು ಉತ್ತರ ದಿಕ್ಕಿನಲ್ಲಿ ಮಹಾರಾಷ್ಟ್ರ, ಈಶಾನ್ಯ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು ನೈರುತ್ಯದಲ್ಲಿ ಕೇರಳ ರಾಜ್ಯಗಳಿವೆ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರವಿದೆ.
ಕರ್ನಾಟಕವು ಒಟ್ಟು ೧೭೬ ತಾಲೂಕುಗಳನ್ನು ೭೪೫ ಹೋಬಳಿಗಳನ್ನು ಹಾಗೂ ಸುಮಾರು ೫೭೦೦೯ ಗ್ರಾಮ ಪಂಚಾಯತ್ಗಳನ್ನು ಒಳಗೊಂಡಿದೆ.
ಕರ್ನಾಟಕ ಜನಸಂಖ್ಯೆ ಜನಗಣತಿ ೨೦೧೧ ರ ಪ್ರಕಾರ ಗಂಡಸರು ೩೦೯೬೬೫೭, ಹೆಂಗಸರು ೩೦೧೨೮೬೪೦ ಒಟ್ಟು ೩೦೯೬೬೬೫೭ ಇರುತ್ತದೆ.
ಕರ್ನಾಟಕ ಎಂಬ ಶಬ್ದದಲ್ಲಿ ಅದ್ಭುತವಾದ ಮಾಂತ್ರಿಕ ಶಕ್ತಿ ಅಡಗಿದೆ ಕರಿಯ ಮಣ್ಣಿನ ನಾಡು ಎಂಬ ಅರ್ಥ ನೀಡುವ ಪದಗಳು ಸೇರಿ ಕರ್ನಾಟಕ ಎಂದಾಗಿದೆ ಕರುನಾಡು ಎತ್ತರದ ಭೂಮಿ ಇರುವ ನಾಡು ಎಂಬುದೇ ಕರ್ನಾಟಕ ಆಗಿದೆ ಇದಕ್ಕೆ ಕಮ್ಮಿತ್ತು ನಾಡು ಶ್ರೀಗಂಧದ ಕಂಪನ್ನುಳ್ಳ ನಾಡು ಎಂದು ಅರ್ಥವಿದೆ. ಈ ನಾಡನ್ನು ಚಿನ್ನದನಾಡು ಕವಿಗಳು ಬೀಡು ಹಾಗೂ ಗಂಧದ ಗೂಡು ಸಂಸ್ಕೃತಿಯ ಗೂಡು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಇಮ್ಮಡಿ ಪುಲಕೇಶಿ, ಹೊಯ್ಸಳ್ಳ ಬಿಟ್ಟಿದೇವ, ರಾಜೇಂದ್ರ ಚೋಳ, ಹಕ್ಕ ಬುಕ್ಕರು, ಕೃಷ್ಣದೇವರಾಯ, ರಾಣೀ ಅಬ್ಬಕ್ಕ, ಕಿತ್ತೂರ ರಾಣಿ ಚನ್ನಮ್ಮ, ಬೆಳವಡಿಮಲ್ಲಮ್ಮ ಆಳಿದ್ದಾರೆ. ಔರಂಗಜೇಬನನ್ನು ತಲ್ಲಣಗೊಳಿಸಿದ ಶಿವಾಜಿಯಂಥ ಧೀರ ದಾಳಿಯೆತ್ತಿ ಬಂದಾಗ ಬೆಳವಡಿ ಮಲ್ಲಮ್ಮ ಅವರನ್ನು ಸೋಲಿಸಿದ್ದೆ ಅಲ್ಲದೆ ಶಿವಾಜಿಯನ್ನು ಅವಮಾನಗೊಳಿಸದೆ ಇಂಥ ಆಕ್ರಮಣದ ಹುಚ್ಚು ಮಾಡಬಾರದೆಂದು ತಿಳಿಹೇಳಿದ ಸಂಸ್ಕೃತಿಯ ವೀರ ಘನತೆಯ ನಾಡಿದು.
ಹೈದರಾಲಿಯ ಸೈನ್ಯ ಚಿತ್ರದುರ್ಗ ಕೋಟೆ ಕಿಂಡಿಯೊಂದರಿಂದ ನುಸುಳಿ ಬರಲು ಪ್ರಯತ್ನಿಸುವಾಗ ಒಬ್ಬಂಟಿ ಯಾದ ಓಬವ್ವ ಬರಿ ಒನಕೆಯಿಂದಲೆ ಓಬ್ಬೊಬ್ಬನ ಸೈನಿಕನನ್ನು ಜಜ್ಜಿ ಹಾಕಿ ಕಾವಲಿನವರನ್ನೆಚ್ಚರಿಸಿ ಕೋಟೆಯನ್ನು ರಕ್ಷಿಸಿದ ನಾಡು.
ಕೆಳದಿ ಚೆನ್ನಮ್ಮ ತನ್ನ ಗಂಡ ಸೋಮಶೇಖರ ನಾಯಕ ನಿಧನ ನಂತರ ರಾಜ್ಯವಾಳಿದಾಗ ಶಿವಾಜಿಯ ಮಗ ರಾಜಾರಾಮ ಮೊಗಲಸೇನನು ಕಣ್ಣು ತಪ್ಪಿಸಿ ಉತ್ತರ ಭಾರತದಲ್ಲೆಲ್ಲೂ ಆಶ್ರಯ ದೊರೆಯದೆ ದಕ್ಷಿಣಕ್ಕೆ ಬಂದಾಗ ಚನ್ನಮ್ಮ ಅವನಿಗೆ ಆಸರೆ ನೀಡುತ್ತಾಳೆ. ಇದರಿಂದ ಔರಂಗಜೇಬನ ವೈರವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಅಪಾರವಾದ ಮೊಗಲಸೇನೆ ಕೆಳದಿಯ ಮೇಲೆ ಯುದ್ಧ ಸಾರಿದಾಗ ಈ ಘೋರ ಸಂಗ್ರಾಮದಲ್ಲಿ ಶೌರ್ಯದಿಂದ ಹೋರಾಡಿದ ರಾಣಿ ಕೆಳದಿ ಚೆನ್ನಮ್ಮನಿಗೆ ಜಯವಾಗುತ್ತದೆ. ಕನ್ನಡದ ಅಭಿಮಾನ ದಿಗಂತದಲ್ಲಿ ರಾರಾಜಿಸುತ್ತದೆ.
ಜನ್ನ, ಪಂಪ, ರನ್ನ, ಹರಿಹರ, ರಾಘವಾಂಕ, ಕುವೆಂಪು ಗೋವಿಂದ ಪೈ, ಜಿ.ಪಿ. ರಾಜರತ್ನಂ ಇನ್ನೂ ಹಲವಾರು ಪ್ರಸಿದ್ಧ ಕವಿಗಳು ಬಳೆ ತಮ್ಮ ಕವಿತಾ ಶಕ್ತಿಯಿಂದ ಕನ್ನಡ ಸಾಹಿತ್ಯ ಸೇವೆ ಮಾಡಿದ್ದಾರೆ. ಬಸವೇಶ್ವರ, ಚನ್ನಬಸವ, ಅಲ್ಲಮ ಪ್ರಭು, ಮೊದಲಾದ ಶಿವಶರಣರೂ ಅಕ್ಕಮಹಾದೇವಿಯಂತಹ ಶಿವಶರಣೆಯರು ಬಾಳಿ ಬೆಳಗಿದ್ದಾರೆ ಪುರಂದರದಾಸ, ಕನಕದಾಸರಂತ ಪರಮ ಭಕ್ತರೂ ಆಗಿ ಹೋಗಿದ್ದಾರೆ.
ನಮ್ಮ ನಾಡಿನ ಶಿಲ್ಪ ವೈಭವವಂತೂ ವಿಶ್ವ ವಿಖ್ಯಾತ ಬೇಲೂರು ಹಳೆಯ ಬೀಡು ದೇವಾಲಯಗಳ ಗಲ್ಲು ಗೋಡೆಗಳು ರಾಮಾಯಣ ಮಹಾಭಾರತಗಳ ಕಥೆಗಳನ್ನು ಹೇಳುತ್ತವೆ. ಪಟ್ಟದ ಕಲ್ಲುಗಳಲ್ಲಿನ ಉಸುಕಿನ ಶಿಲ್ಪಗಳ ವಿಲಾಸ ನಿಭ್ರಮೆಗಳು ಲೊಕೋತ್ತರವಾದವು. ಕೂಡಲಸಂಗಮ ಶ್ರವಣಬೆಳಗೋಳದ ಏಕಶೀಲೆಯಲ್ಲಿ ಕೆತ್ತಿದ ಬಾಹುಬಲಿ ಮೂರ್ತಿ ಶಿಲ್ಪ ಕಲೆಗೆ ಹೆಸರಾಗಿದೆ. ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಗೋಳ ಗುಮ್ಮಟ ವಿಜಯಪುರದಲ್ಲಿದೆ. ಕರ್ನಾಟಕಕ್ಕೆ ಮುಕಟಪ್ರಾಯವಾಗಿ ಬೆಳಗಾವಿ ಹಲಗಾದಲ್ಲಿ ಸುವರ್ಣಸೌಧ ನಿರ್ಮಾಣಗೊಂಡಿದೆ.
ಸಂಗೀತದಲ್ಲಿ ವೀಣೆಶೇಷಣ್ಣ ಗಂಗೂಬಾಯಿ ಹಾನಗಲ್ಲ ಕುಮಾರ ಗಂಧರ್ವ, ಹುಕ್ಕೇರಿ ಬಾಳಪ್ಪ ಭೀಮಸೇ, ಜೋಷಿ, ಮಲ್ಲಿಕಾರ್ಜುನ ಮನಸೂರ, ಗಾನಸರಸ್ವತಿಯ ಹೆಮ್ಮೆಯ ಪುತ್ರರಲ್ಲಿ ಕೇವಲ ಕೆಲವರು ಮಾತ್ರ.
ಪಶುಪಾಲನೆ ಪಕ್ಷಿಧಾಮಗಳು ಖನಿಜಸಂಪತ್ತು, ಪ್ರೇಕ್ಷಣಿಯ ಸ್ಥಳಗಳು ಪ್ರಮುಖ ಉತ್ಪನಗಳು ಜನಪದ ವೃತ್ಯಗಳು ಕರ ಕುಶಲ ಕಲೆಗಳಿಗೆ ಹೆಸರುವಾಸಿಯಾಗಿದೆ.
ಎಂಟು ಜನ ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ಥಿಯನ್ನು ಭಾರತ ರತ್ನ ಪ್ರಶಸ್ಥಿಯನ್ನು ಆಧುನಿಕ ಯುಗದಲ್ಲಿ ಸರ್.ಎಂ ವಿಶ್ವೇವೇಶ್ವರಯ್ಯನವರ ತಾಂತ್ರಿಕ ಕೊಡುಗೆ ಗಮನಾರ್ಹ, ಕನ್ನಡದ ಜನ ಬೌದ್ಧಿಕ ಕ್ಷೇತ್ರದಲ್ಲಿ ಪ್ರತಿಭೆ ಹಾಗೂ ಸ್ವಂತಿಕೆಗಳನ್ನು ಮೆರೆದಿದ್ದಾರೆ.
ಕನ್ನಡ ನಾಡನ್ನು ಕಟ್ಟಲು ಸಾಹಿತಿಗಳು ರಾಜ ತಜ್ಞರು ಹಾಗೂ ಆಲೂರ ವೆಂಕಟರಾವ್, ಎಸ್ ನಿಜಲಿಂಗಪ್ಪ ,ಮುದನೀಡು ಕೃಷ್ಣರಾವ್, ಆರ್.ಆರ್ ದಿವಾಕರ, ಸಿದ್ದಪ್ಪ ಕಂಬಳಿ, ಕೆ.ಆರ್ ಕಾರಂತ, ಹಾಸನದ ಕೆ.ಎಂ. ರುದ್ರಪ್ಪ, ಮುಂತಾದವರು ಪ್ರಯತ್ನಿಸಿದರು. ಅವರೆಲ್ಲರ ಪರಿಶ್ರಮದ ಫಲವಾಗಿಯೂ ಭಾರತವು ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ ವಿಂಗಡಣೆ ಮಾಡಿದ ಕಾರಣವಾಗಿ ರಾಜ್ಯ ವಿಂಗಡಣೆ ಆದವು.
ಕರ್ನಾಟಕದವರ ಬದುಕಿನ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ಹಿರಿಮೆ ಮತ್ತು ಕಣ್ಣಾಡಿಸುತ್ತ ನಮ್ಮ ಉಜ್ವಲ ಪರಂಪರೆಗೆ ತಕ್ಕಂತೆ ಬದುಕ ಬೇಕೆನ್ನುವ ಪ್ರತಿಜ್ಞೆ ಮಾಡುವ ದಿನ. ಇದು ನಾವು ಹೆಮ್ಮೆಯ ಕನ್ನಡಿಗರು ಎಂದೂ ಸ್ವಾಭಿಮಾನಕ್ಕೆ ಕುಂದುಬಾರದಂತೆ ಎಚ್ಚರ ಮತ್ತು ಹೆಮ್ಮೆಗಳಿಂದ ಬದುಕುವ ಸಂಕಲ್ಪ ಮಾಡುವ ದಿನ ಇದು ಹಾಗೆಯೇ ನಮ್ಮ ನಾಡಿನ ತಾಯಿ ಭುವನೇಶ್ವರಿಯನ್ನು ಗೌರವಿಸುತ್ತೇವೆ.
ಎಲ್ಲೆಲ್ಲಿಯೂ ಸತ್ಯ ಶಾಂತಿ ಪ್ರೀತಿ ಹರಡಲಿ ಎಂದು ಕರ್ನಾಟಕ ಮಾತೆಯಲ್ಲಿ ಪ್ರಾರ್ಥಿಸೋಣ ಸಿರಿಗನ್ನಡಂ ಗಲ್ಗೆ, ಸಿರಿಗನ್ನಡಂ ಬಾಳ್ಗೆ.
-ಎಂ.ವೈ. ಮೆಣಸಿನಕಾಯಿ
ಕರ್ನಾಟಕದ ಹೆಮ್ಮೆಯ ನಾಡಹಬ್ಬ-ಕನ್ನಡ ರಾಜ್ಯೋತ್ಸವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ