ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನವೆಂಬರ್ ೧ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಸಿ.ಪಿ.ಎಡ್. ಮೈದಾನದಲ್ಲಿ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ರಾಷ್ಟ ಧ್ವಜಾರೋಹಣವನ್ನು ನೆರವೇರಿಸಿ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ರಾಜ್ಯದ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಸಂದೇಶವನ್ನು ನೀಡಲಿದ್ದಾರೆ.
ರಾಜ್ಯೋತ್ಸವದ ನಿಮಿತ್ಯ ವಿವಿಧ ಜಾನಪದ ಕಲಾವಾಹಿನಿ ಮತ್ತು ರೂಪಕಗಳನ್ನೊಳಗೊಂಡ ಭವ್ಯ ಮೆರವಣಿಗೆಯನ್ನು ಅವರು ಉದ್ಘಾಟಿಸಲಿದ್ದಾರೆ.
ನಂತರ ಸಂಜೆ ೫-೩೦ ಗಂಟೆಗೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮವನ್ನು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ ಶೆಟ್ಟರ ಅವರು ಉದ್ಘಾಟಿಸುವರು. ಉಪ ಮುಖ್ಯಮಂತ್ರಿಗಳು, ಸಾರಿಗೆ ಹಾಗೂ ಕೃಷಿ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಕೇಂದ್ರ ಸರ್ಕಾರದ ರಾಜ್ಯ ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರು ಉಪಸ್ಥಿತರಿರುವರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಶಶಿಕಲಾ ಜೊಲ್ಲೆ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಿಗಿಮಠ, ಜಿಲ್ಲಾ ಪಂಚಾಯರ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಸರ್ಕಾರದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರಗೌಡಾ ಐ. ಪಾಟೀಲ ಅವರು ವಿಶೇಷ ಆಮಂತ್ರಿತರಾಗಿ ಭಾಗವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನೀಲ ಬೆನಕೆ ಅವರು ವಹಿಸುವರು. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯರು ಉಪಸ್ಥಿತರಿರುವರು.
ವಾಹನ ಸಂಚಾರ ಮಾರ್ಗ ಬದಲಾವಣೆ
ನವೆಂಬರ್-೧ ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಕೆಲವು ಕಡೆಗಳಲ್ಲಿ ವಾಹನ ಮಾರ್ಗ ಬದಲಾವಣೆ ಮತ್ತು ನಿರ್ಬಂಧ ವಿಧಿಸಲಾಗಿದೆ.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೆರವಣಿಗೆಯು ನಗರದ ಸಿಪಿಎಡ್ ಮೈದಾನದಿಂದ ಪ್ರಾರಂಭವಾಗಿ ಕ್ಲಬ್ ರಸ್ತೆ ಮುಖಾಂತರ ಚನ್ನಮ್ಮಾ ವೃತ್ತ, ಕಾಕತಿ ವೇಸ್, ಶನಿವಾರ ಖೂಟ, ಗಣಪತ ಗಲ್ಲಿ, ಕಂಬಳಿ ಖೂಟ, ನರಗುಂದಕರ ಭಾವೆ ಚೌಕ, ರವಿವಾರ ಪೇಠೆ, ಕರ್ನಾಟಕ ಚೌಕ, ಪಿಂಪಳ ಕಟ್ಟಾ, ಕಲ್ಮಠ ರಸ್ತೆ, ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮಾ ಚೌಕ, ಕಿರ್ಲೋಸ್ಕರ ರಸ್ತೆ, ಬೋಗಾರವೇಸ್ ವೃತ್ತ, ಯಂಡೇಖೂಟ, ಕಾಲೇಜ ರಸ್ತೆ ಮಾರ್ಗಗಳಲ್ಲಿ ಸಂಚರಿಸಿ ಲಿಂಗರಾಜ ಕಾಲೇಜ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಗಾಗಿ ಅಂದು ಬೆಳಿಗ್ಗೆ ೮ ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
೧) ಚನ್ನಮ್ಮಾ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪುರ ಕಡಗೆ ಸಾಗುವ ಭಾರಿ ವಾಹನಗಳ ಚಾಲಕ/ಸವಾರರು ಜಿನಾ ಬಕುಲ್ ಸರ್ಕಲ್ದಿಂದ ಬಾಕ್ಸೈಟ್ ರಸ್ತೆ, ಹಿಂಡಲಗಾ ಫಾರೆಸ್ಟ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್ (ಅರಗನ ತಾಲಾಬ), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಕೇಂದ್ರೀಯ ವಿದ್ಯಾಲಯ ನಂ.೨, ಶರ್ಕತ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.
೨) ಖಾನಾಪುರ ಹಾಗೂ ಗೋವಾ ಕಡೆಗಳಿಂದ ನಗರಕ್ಕೆ ಬರುವ ಎಲ್ಲ ಮಾದರಿ ವಾಹನಗಳು ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ್ ಪಾರ್ಕ್, ಕೇಂದ್ರಿಯ ವಿದ್ಯಾಲಯ ನಂ.೨, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಗಾಂಧಿ ಸರ್ಕಲ್ (ಅರಗನ ತಾಲಾಬ), ಹಿಂಡಲಗಾ ಗಣೇಶ ಮಂದಿರ, ಹಿಂಡಲಗಾ ಫಾರೆಸ್ಟ್ ನಾಕಾ, ಬಾಕ್ಸಾಯಿಟ್ ರಸ್ತೆ, ಜಿನಾ ಬಕುಲ್ ಸರ್ಕಲ್ ಸೇರಿ ಮುಂದೆ ಸಾಗುವುದು. ಕೆಎಸ್ಆರ್ಟಿಸಿ ಬಸ್ಸುಗಳು ಇಂಡಾಲ್ಕೊ ಸರ್ಕಲ್ ಅಂಡರ್ ಬ್ರಿಜ್, ರಾಷ್ಟ್ರೀಯ ಹೆದ್ದಾರಿ-೪, ಕ್ಯಾನ್ಸರ್ ಆಸ್ಪತ್ರೆ ಮುಂದೆ ತಿರುವು ಪಡೆದುಕೊಂಡು ಕನಕದಾಸ ಸರ್ಕಲ್ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
೩) ಕೇಂದ್ರ ಬಸ್ ನಿಲ್ದಾಣದಿಂದ ಅಥಣಿ, ಚಿಕ್ಕೋಡಿ, ಕೊಲ್ಲಾಪುರ, ಸಂಕೇಶ್ವರ ಕಡೆಗೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳು ಅಶೋಕ ಪಿಲ್ಲರ, ಕನಕದಾಸ ವೃತ್ತ, ಕ್ಯಾನ್ಸರ್ ಆಸ್ಪತ್ರೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿ-೪ ರ ಮೂಲಕ ಸಂಚರಿಸುವುದು.
೪) ಖಾನಾಪುರ ಗೋವಾ ಕಡೆಗೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳು ಅಶೋಕ ಪಿಲ್ಲರ, ಕನಕದಾಸ ವೃತ್ತ, ಕ್ಯಾನ್ಸರ್ ಆಸ್ಪತ್ರೆ ಕ್ರಾಸ್, ರಾಷ್ಟ್ರೀಯ ಹೆದ್ದಾರಿ-೪, ಇಂಡಾಲ್ಕೊ ಸರ್ಕಲ್, ಬಾಕ್ಸಾಯಿಟ್ ರಸ್ತೆ, ಹಿಂಡಲಗಾ ಫಾರೆಸ್ಟ್ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್ (ಅರಗನ ತಾಲಾಬ), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಕೇಂದ್ರೀಯ ವಿದ್ಯಾಲಯ ನಂ.೨, ಶರ್ಕತ ಪಾರ್ಕ್, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಾಗುವುದು.
೫) ಜೀಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ/ಕಂಬಳಿ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಜೀಜಾ ಮಾತಾ ಸರ್ಕಲ್ದಿಂದ ನೇರವಾಗಿ ಹಳೆಪಿಬಿ ರಸ್ತೆಯ ಮೂಲಕ ಮುಂದೆ ಸಾಗುವುದು.
೬) ಆರ್ಟಿಓ ಸರ್ಕಲ್ ಮುಖಾಂತರ ಚನ್ನಮ್ಮಾ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳ ಚಾಲಕರು ಕೋಲ್ಲಾಪೂರ ಸರ್ಕಲ್/ ಸೆಂಟ್ರಲ್ ಬಸ್ ನಿಲ್ದಾಣ ಕಡೆಗೆ ಸಾಗುವುದು.
೭) ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುತ್ತಿದೆ.
೮) ಮೆರವಣೆಗೆ ಸಾಗುವ ಮಾರ್ಗವಾದ ಕ್ಲಬ್ ರಸ್ತೆ, ಚನ್ನಮ್ಮಾ ವೃತ್ತ, ಕಾಕತಿ ವೇಸ್, ಶನಿವಾರ ಖೂಟ, ಗಣಪತ ಗಲ್ಲಿ, ಕಂಬಳಿ ಖೂಟ, ನರಗುಂದಕರ ಭಾವೆ ಚೌಕ, ರವಿವಾರ ಪೇಠೆ, ಕರ್ನಾಟಕ ಚೌಕ, ಪಿಂಪಳ ಕಟ್ಟಾ, ಕಲ್ಮಠ ರಸ್ತೆ, ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮಾ ಚೌಕ, ಕಿರ್ಲೋಸ್ಕರ ರಸ್ತೆ, ಬೋಗಾರವೇಸ್ ವೃತ್ತ, ಯಂಡೇಖೂಟ, ಕಾಲೇಜ ರಸ್ತೆಗಳಲ್ಲಿ ಮುಂಜಾನೆ ೦೮ ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
೯) ಅಥಣಿ, ಚಿಕ್ಕೋಡಿ. ಕೊಲ್ಲಾಪುರ, ಸಂಕೇಶ್ವರ ಕಡೆಯಿಂದ ನಗರಕ್ಕೆ ಬರುವ ಕೆಎಸ್ಆರ್ಟಿಸಿ ಬಸ್ಗಳು ಇಂಡಾಲ್ಕೊ ಸರ್ಕಲ್ ಅಂಡರ್ ಬ್ರಿಜ್, ರಾಷ್ಟ್ರೀಯ ಹೆದ್ದಾರಿ-೪, ಕ್ಯಾನ್ಸರ್ ಆಸ್ಪತ್ರೆ ಮುಂದೆ ತಿರುವು ಪಡೆದುಕೊಂಡು ಕನಕದಾಸ ಸರ್ಕಲ್ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು. ಮಾಳಮಾರುತಿ ಪೊಲೀಸ್ ಠಾಣಾ ಹದ್ದಿಯಿಂದ ರೂಪಕ ವಾಹನಗಳು ಬರುವ ಸಮಯದಲ್ಲಿ ಕ್ಯಾನ್ಸ್ರ ಆಸ್ಪತ್ರೆ, ಮುಚ್ಚಂಡಿ ಗ್ಯಾರೆಜ್, ಸಾಂಬ್ರಾ ಅಂಡರ್ ಬ್ರಿಜ್, ಗಾಂಧಿನಗರ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
೧೦) ಹಿರೇಬಾಗೆವಾಡಿ ಹಾಗೂ ಮಾರಿಹಾಳ ಪೊಲೀಸ್ ಠಾಣಾ ಹದ್ದಿಯಿಂದ ರೂಪಕ ವಾಹನಗಳು ಬರುವ ಸಮಯದಲ್ಲಿ ಬಾಗಲಕೋಟ, ನೇಸರಗಿ, ಯರಗಟ್ಟಿ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಕಡೆಯಿಂದ ಬರುವ ಕೆಎಸ್ಆರ್ಟಿಸಿ ಬಸ್ಸ್ಗಳು ಗಾಂಧಿನಗರ, ಪ್ರೂಟ್ ಮಾರ್ಕೆಟ್, ಕನಕದಾಸ ಸರ್ಕಲ್ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
೧೧) ಶುಕ್ರವಾರ ಬೆಳಿಗ್ಗೆ ೦೮ ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳನ್ನು ನಗರದಲ್ಲಿ ಸಂಚರಿಸಲು ನಿಷೇಧಿಸಲಾಗಿದೆ.
ಮದ್ಯ ಮಾರಾಟ, ಸಾಗಣಿಕೆ ನಿಷೇಧ
ಅ.31 ರಂದು ಸಾಯಂಕಾಲ 6 ಗಂಟೆಯಿಂದ ನ2 ರಂದು ಬೆಳಿಗ್ಗೆ 6 ಗಂಟೆಯವರೆಗೆ ಬೆಳಗಾವಿ ತಾಲೂಕಿನಾದ್ಯಂತ ಮದ್ಯದ ಅಂಗಡಿಗಳಲ್ಲಿ, ವೈನಶಾಪ್, ಬಾರ್ಗಳಲ್ಲಿ, ಕ್ಲಬ್ಗಳಲ್ಲಿ ಮತ್ತು ಹೊಟೇಲ್ಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯ ಸಾಗಣಿಕೆಯನ್ನು ನಿಷೇಧಿಸಿದ್ದು, ಮದ್ಯದ ಅಂಗಡಿಗಳನ್ನು ಹಾಗೂ ಕೆಎಸ್ಬಿಸಿಎಲ್ ಡಿಪೋಗಳನ್ನು, ಹೊಟೇಲ್ಗಳಲ್ಲಿರುವ ಬಾರ್ಗಳನ್ನು ಮುಚ್ಚತಕ್ಕದ್ದು ಹಾಗೂ ಎಲ್ಲ ಅಬಕಾರಿ ಸನ್ನದು ಅಂಗಡಿಗಳನ್ನು ಮುಚ್ಚಿ ಸೀಲ್ ಹಾಕತಕ್ಕದ್ದು ಎಂದು ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ