ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ– ತಾಲೂಕಿನ ಕಣಗಲಾ ರಾಷ್ರ್ಟೀಯ ಹೆದ್ದಾರಿಯಲ್ಲಿ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ದಿಂಡಿನೇರ್ಲಿ ಗ್ರಾಮದ ವೈಭವ ಸಂಭಾಜಿ ವಾಡಕರ (೨೩), ಮಾಹಾರಾಷ್ಟ್ರದ ಕೊಲ್ಹಾಪುರದ ದಿಗ್ಗಜಯ ಸಚೀನ ಪಾಟೀಲ (೨೨) ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ವಾಹನದಲ್ಲಿ ಪ್ರಯಾಣಿಸುತ್ತಿದ್ದ ತೇಜಸ ಪಾಟೀಲ, ಸಂದೀಪ ಪಾಟೀಲ, ವೇದಿತಾ ಪಾಟೀಲ, ವಿರೇನ ಪಾಟೀಲ, ಅಭಿನವ ಪಾಟೀಲ, ಅರನವ ಪಾಟೀಲ, ಸಾಗರ ಪಾಟೀಲ ಇವರಿಗೆ ತೀವ್ರ ಗಾಯವಾಗಿದ್ದು ಇವರನ್ನು ಕೋಲ್ಹಾಪುರ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಅತಿವೇಗದಿಂದ ಚಾಲನೆ ಮಾಡಿದ್ದರಿಂದ ಅಪಘಾತಕ್ಕೆ ಕಾರಣವಾಗಿದೆ ಎಂದು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ