Belagavi NewsBelgaum NewsKannada NewsKarnataka NewsNationalPolitics

*ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದ ಆರ್‌ಸಿ‌ಯು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ ಈಗಾಗಲೇ 2025-26 ನೇ ಸಾಲಿನಲ್ಲಿ ಮುಖ್ಯ ಆವರಣದಲ್ಲಿರುವ  ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಪ್ರಥಮ ವರ್ಷಕ್ಕೆ ಹೆಚ್ಚು ಅಂಕಗಳನ್ನು ಪಡೆದ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ  ಧನ ನೀಡಲಾಯಿತು.

ಬೇರೆ ವಿದ್ಯಾರ್ಥಿಗಳಿಗೆ  ಮಾದರಿ ಹಾಗೂ ಪ್ರೇರಣೆ ನೀಡುವ ದೃಷ್ಠಿಯಿಂದ ಅಗ್ರ ಶ್ರೇಯಾ ( Subject Scholar) ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿರುತ್ತದೆ. ಅದರಂತೆ, ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಅಗ್ರ ಶ್ರೇಯಾ ( Subject Scholar)  ಪ್ರಶಸ್ತಿಯನ್ನು   ವಿಭಾಗಗಳಲ್ಲಿ ಓರ್ವ ವಿದ್ಯಾರ್ಥಿಗೆ ಗುರುತಿಸಿ, 23  ವಿಭಾಗಗಳ 23 ವಿದ್ಯಾರ್ಥಿಗಳಿಗೆ ತಲಾ ರೂ.5000/- ರಂತೆ ಒಟ್ಟು ರೂ, 1,15,000/-ಪ್ರೋತ್ಸಾಹ ಧನವನ್ನು ನೀಡಲಾಗಿದೆ.

ಕಾರ್ಯಕ್ರಮವು ಕುಲಪತಿಗಳ ಅಧ್ಯಕ್ಷತೆಯಲ್ಲಿ ಹಾಗೂ ಕುಲಸಚಿವರು,  ಹಣಕಾಸು ಅಧಿಕಾರಿಗಳ ಎಲ್ಲ  ವಿಭಾಗದ ಮುಖ್ಯಸ್ಥರುಗಳ  ಉಪಸ್ಥಿತಿಯಲ್ಲಿ ಜರುಗಿತು.

Home add -Advt

Related Articles

Back to top button