ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ 90 ವರ್ಷಗಳ ಸಾರ್ಥಕ ಹೆಜ್ಜೆಗಳೊಂದಿಗೆ ಮುನ್ನಡೆಯುತ್ತಿದೆ. ಹಿರಿಯ ಪತ್ರಕರ್ತರೂ, ಖ್ಯಾತ ಸಾಹಿತಿಗಳೂ ಆಗಿದ್ದ ಡಿ.ವಿ ಗುಂಡಪ್ಪ(ಡಿವಿಜಿ) ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ರಚನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಂದ ಪತ್ರಕರ್ತರ ಹಿತಕಾಯುವಲ್ಲಿ ಮುನ್ನಡೆದಿದೆ. ಜೊತೆಗೆ ಪತ್ರಕರ್ತರ ಬೌದ್ಧಿಕ ಉನ್ನತೀಕರಣಕ್ಕಾಗಿ ಸಂದರ್ಭಾನುಸಾರವಾಗಿ ಅನೇಕ ಚಟುವಟಿಕೆಗಳನ್ನು ರಾಜ್ಯದಾದ್ಯಂತ ನಡೆಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಗುಣಾತ್ಮಕ ಕೊಡುಗೆಯನ್ನು ನೀಡುತ್ತಿದೆ.
ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರಾತಿನಿಧಿಕ ಸಂಘಟನಾ ಸಂಸ್ಥೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತನ್ನ ಸಮುದಾಯಕ್ಕೆ ನ್ಯಾಯವೊದಗಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಮೂಲಕ ಅವರನ್ನು ವೃತ್ತಿಪರವಾಗಿ ಇನ್ನಷ್ಟು ಪ್ರೋತ್ಸಾಹಿಸುವ ಕೆಲಸ ಸಂಘದ ಅತ್ಯಂತ ಮಹತ್ವದ ಚಟುವಟಿಕೆಗಳಲ್ಲಿ ಒಂದು ಎಂಬುದು ಗಮನಾರ್ಹ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಅಧ್ಯಕ್ಷ ಶಿವಾನಂದ ತಗಡೂರು ಮಾಹಿತಿ ನೀಡಿದ್ದಾರೆ.
ವಿವರಗಳು ಇಂತಿದೆ.
ಡಿವಿಜಿ ಪ್ರಶಸ್ತಿ: ರವಿಹೆಗಡೆ, ಸಂಪಾದಕರು, ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್
ಎಚ್. ಎಸ್.ದೊರೆಸ್ವಾಮಿ ಪ್ರಶಸ್ತಿ: ಬಿ.ಎಂ ಹನೀಫ್ ಪ್ರಜಾವಾಣಿ
ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್.ಎನ್.ಅಶೋಕಕುಮಾರ್, ಸಂಪಾದಕರು, ಗೊಮ್ಮಟವಾಣಿ
ಪಾಟೀಲ್ ಪುಟ್ಟಪ್ಪ ಪ್ರಶಸ್ತಿ : ಎಸ್.ಕೆ.ಶೇಷಚಂದ್ರಿಕ, ಹಿರಿಯ ಪತ್ರಕರ್ತರು
ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಅ.ಚ.ಶಿವಣ್ಣ, ಹಿರಿಯ ಪತ್ರಕರ್ತರು
ಪಿ.ಆರ್.ರಾಮಯ್ಯಪ್ರಶಸ್ತಿ: ಯು.ಎಸ್.ಶೆಣೈ, ಸಂಪಾದಕರು, ಕುಂದಪ್ರಭ
ಗರುಡನಗಿರಿ ನಾಗರಾಜ್ ಪ್ರಶಸ್ತಿ: ಕೆ.ಆರ್.ಮಂಜುನಾಥ್, ಸಂಪಾದಕರು, ಮಲೆನಾಡ ಮಂದಾರ
ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ : ಕೋಡಿ ಹೊಸಳ್ಳಿ ರಾಮಣ್ಣ, ಹಿರಿಯ ಪತ್ರಕರ್ತರು
ಕಿಡಿ ಶೇಷಪ್ಪ ಪ್ರಶಸ್ತಿ: ಕೆ.ಎಂ.ರೇಖಾ, ಸಂಪಾದಕರು, ಹೊಸಪೇಟೆ ಟೈಮ್ಸ್
ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ, ಸಂಪಾದಕರು, ಶಿಡ್ಲು ಪತ್ರಿಕೆ
ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ, ಬ್ಯೂರೋ ಮುಖ್ಯಸ್ಥೆ ಪ್ರಜಾವಾಣಿ, ಹುಬ್ಬಳ್ಳಿ
ಎಂ. ನಾಗೇಂದ್ರರಾವ್ ಪ್ರಶಸ್ತಿ : ಶಾಂತಕುಮಾರ್ ಕೆ.ಎನ್.ಬ್ಯೂರೊ ಮುಖ್ಯಸ್ಥ, ವಿಜಯವಾಣಿ, ಶಿವಮೊಗ್ಗ
ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು, ವಿಜಯಕರ್ನಾಟಕ
ಹೆಚ್.ಎಸ್‌ರಂಗಸ್ವಾಮಿ ಪ್ರಶಸ್ತಿ : ಪಿ.ಸುನೀಲ್‌ಕುಮಾರ್ ಸಂಪಾದಕರು ‘ಸಿಟಿ ಹೈಲೈಟ್ಸ್’ ಬೆಂಗಳೂರು
ಸಂಘದ ವಿಶೇಷ ಪ್ರಶಸ್ತಿಗಳು:
ಪ್ರಹ್ಲಾದಗುಡಿ, ವರದಿಗಾರರು, ಕನ್ನಡ ಪ್ರಭ, ರಾಯಚೂರು,
ಮುನಿವೆಂಕಟೇಗೌಡ ಹಿರಿಯ ಪತ್ರಕರ್ತರು ಕೋಲಾರ
ಎಂ.ಕೆ ರಾಘವೇಂದ್ರ ಮೇಗರವಳ್ಳಿ. ‘ವಿಜಯಕರ್ನಾಟಕ’ ತೀರ್ಥಹಳ್ಳಿ
ಪ್ರಕಾಶ್ ರಾಮಜೋಗಿಹಳ್ಳಿ ವಾರ್ತಾಭಾರತಿ ಬೆಂಗಳೂರು
ಅ. 3 ರ ಭಾನುವಾರ ಸಂಜೆ 5 ಕ್ಕೆ ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನ ಆವರಣದಲ್ಲಿ ಆಯೋಜನೆಗೊಂಡಿರುವ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಬೆಳಗಾವಿಯಲ್ಲಿ ರೈತರ ಅರೆಬೆತ್ತಲೆ ಪ್ರತಿಭಟನೆ; ಧರಣಿ ವೇಳೆ ಎಲ್ಲಮ್ಮ ದೇವಿ ಮೈಮೇಲೆ ಬಂತೆಂದು ಮಹಿಳೆ ಹೈಡ್ರಾಮಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ