ಪ್ರಗತಿವಾಹಿನಿ ಸುದ್ದಿ; ಕುಮಟಾ: ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ಈವರೆಗೆ 20 ಜನರು ಮೃತಪಟ್ಟಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾತನಾಡಿದ ಸಚಿವರು, ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದರು ಕೆಲ ಜಿಲ್ಲೆಗಳಲ್ಲಿ ಮಳೆ ಕೊರೆತೆಯುಂಟಾಗಿದೆ. ಇನ್ನು ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ರಾಜ್ಯದಲ್ಲಿ ಈವರೆಗೆ ಮಳೆ ಹಾನಿಗೆ 20 ಜನರು ಸಾವನ್ನಪ್ಪಿದ್ದಾರೆ. 40 ಜಾನುವಾರುಗಳು ಮೃತಪಟ್ಟಿವೆ. ಹಲವೆಡೆ ಮನೆ ಕುಸಿತ, ಬೆಳೆನಾಶವುಂಟಾಗಿ ಅಪಾರ ನಷ್ಟ ಸಂಭವಿಸಿದೆ ಎಂದರು.
ಕೆಲ ಜಿಲ್ಲೆಗಳಲ್ಲಿ ಮಳೆ ಕೊರತೆಯುಂಟಾಗಿ ಬೆಳೆದ ಬೆಳೆ ಒಣಗಿದೆ. ನೀರಿನ ಸಮಸ್ಯೆಯುಂಟಾಗಿದೆ. ಇಂತಹ ಪ್ರದೇಶಕ್ಕೆ ಜುಲೈ ಕೊನೆ ವಾರದವರೆಗೂ ಕಾದು ಮೋಡ ಬಿತ್ತನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ