
ಪ್ರಗತಿವಾಹಿನಿ ಸುದ್ದಿ: ಎಂಇಎಸ್ ಪುಂಡರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಕಂದಕ್ಟರ್ ಮೇಲೆ ಹಲ್ಲೆ ಘಟನೆ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಎರಡೂ ರಜಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ತೀವ್ರಗೊಳಿಸಿದ್ದರೆ ಕರ್ನಾಟಕದ ಬೆಳಗಾವಿ ಭಾಗದಲ್ಲಿ ಕರವೇ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕೊಲ್ಲಾಪುರಕ್ಕೆ ತೆರಳುವ ಕೆಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಮಾರ್ಗವಾಗಿ ತೆರಳುವ ಬಸ್ ಗಳು ಬಂದಾಗಿದ್ದು, ಈ ಮಾರ್ಗವಾಗಿ ಪ್ರತಿದಿನ 120 ಬಸ್ ಗಳು ಸಂಚಾರಿಸುತ್ತಿದ್ದವು. ಮಧ್ಯಾಹ್ನದ ಬಳಿಕ ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರದ ಬಗ್ಗೆ ನಿರ್ಧಾರವಾಗಲಿದೆ.
ಮಹಾರಾಷ್ಟ್ರದಿಂದಲೂ ಯಾವುದೇ ಬಸ್ ಗಳು ಕರ್ನಾಟಕದತ್ತ ಬರುತ್ತಿಲ್ಲ. ಬಸ್ ಸಂಚಾರವನ್ನು ಮಹಾ ಸರ್ಕಾರ ಬಂದ್ ಮಾಡಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ