Latest

ಮಾಜಿ ಭುವನ ಸುಂದರಿ ಫ್ಯಾಷನ್ ಕಂಡು ಕಿಡಿ ಕಾರಿದ ಫ್ಯಾನ್ಸ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ನಟ-ನಟಿಯರು, ಸೆಲೆಬ್ರಿಟಿಗಳು ಹಾಕುವ ಬಟ್ಟೆಗಳ ಬಗ್ಗೆ ಸದಾ ಕಾಲ ಗಮನ ಹರಿಸುವ ಅಭಿಮಾನಿಗಳು, ಕೆಲ ಉಡುಗೆಗಳನ್ನು ಮೆಚ್ಚಿಕೊಂಡು ಶ್ಲಾಘನೆ ವ್ಯಕ್ತಪಡಿಸಿದರೆ, ಫ್ಯಾಷನ್ ಹೆಸರಲ್ಲಿ ವಿಚಿತ್ರ ಬಟ್ಟೆಗಳನ್ನು ತೊಟ್ಟು ಮಿಂಚಿದರೆ ಹಿಗ್ಗಾ ಮುಗ್ಗಾ ಬೈದು ಬುದ್ಧಿಯನ್ನು ಹೇಳುತ್ತಾರೆ.

ಇದೀಗ ಮಾಜಿ ಭುವನ ಸುಂದರಿಯೊಬ್ಬರು ಡ್ರೆಸ್ ವಿಚಾರದಲ್ಲಿ ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ. ಮಿಸ್ ಅಮೆರಿಕಾ, ಮಿಸ್ ಯುನಿವರ್ಸ್ ಪಟ್ಟಕ್ಕೇರಿದ್ದ ಒಲಿವಿಯಾ ಕುಲ್ಪೋ, ಇತ್ತೀಚೆಗೆ ಧರಿಸಿದ್ದ ಡ್ರೆಸ್ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಲಿವಿಯಾ ತಾವು ಪ್ರವಾಸಕ್ಕೆ ಹೋಗಿದ್ದ ವೇಳೆ ಹೋಟೆಲ್ ಗೆ ಊಟಕ್ಕೆ ತೆರಳಿದ್ದ ಸಂದರ್ಭದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಒಳ ಉಡುಪು ಹಾಕದೆ ಧರಿಸಿದ್ದ ಅವರ ಬಟ್ಟೆ ನೋಡಿ ಫ್ಯಾನ್ಸ್ ಗರಂ ಆಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹೀಗೇಕೆ ಬರಬೇಕು? ಕಿಂಚಿತ್ತಾದರೂ ನಾಚಿಕೆ ಬೇಡವೇ? ಎಂದು ಹಿಗ್ಗಾ ಮುಗ್ಗಾ ಕಿಡಿಕಾರಿದ್ದಾರೆ.

ವೀಲ್ ಚೇರ್‌ನಲ್ಲಿ ಬಂದ ಯುವತಿಯನ್ನು ಹೊರಹಾಕಿದ ಪಬ್ ಸಿಬ್ಬಂದಿ

Home add -Advt

Related Articles

Back to top button