Latest

*ಮತ್ತೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಸೇರಿದಂತೆ ದೇಶ,ದ ಹಲವೆಡೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ಕೆಲ ಭಾಗ, ಕರಾವಳಿ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ. ಜೌರಾದ್, ಚಿಂತಾಮಣಿ, ರಾಯಲ್ಪಾಡು, ಗೇರುಸೊಪ್ಪ, ಚಿಂಚೋಳಿ, ಮನ್ನಾಳಿ, ಸಿಂದಗಿ, ಬ್ರಹ್ಮಾವರ, ಬೀದರ್, ಹುಮನಾಬಾದ್, ಅಫಜಲಪುರ, ರಾಯಚೂರು, ಮಧುಗಿರಿ, ಕುಡತಿನಿ, ಹರದನಹಳ್ಳಿಯಲ್ಲಿ ಮಳೆಯಾಗಲಿದೆ.

Home add -Advt

24 ಗಂಟೆಯಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವೆಡೆ, ಕಲಬುರ್ಗಿ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ಗುಡುಗುಸಹಿತ ಭಾರಿ ಮಳೆಯಾಗಲಿದೆ. ಎಂದು ತಿಳಿಸಿದೆ.

Related Articles

Back to top button