Kannada NewsLatest

ಅವರೊಳ್ಳಿ ಮುಷ್ಠಿ ಬೀಗಕ್ಕೆ ಶ್ರಮಿಕ ರತ್ನ ಪ್ರಶಸ್ತಿ ಗೌರವ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಸಿ ಬೀಗಗಳ ಕ್ಷೇತ್ರದಲ್ಲಿ ತನ್ನದೆಯಾದ ಅವರೊಳ್ಳಿ ಬ್ರ್ಯಾಂಡ್ ಎಂಬ ಖ್ಯಾತಿ ಪಡೆದುಕೊಂಡಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿಯ ಕಮ್ಮಾರ ಬೀಗಕ್ಕೆ ಅದರದೇಯಾದ ಇತಿಹಾಸವಿದ್ದು, ಈ ಬೀಗದ ಪ್ರವೀಣತೆಗೆ ಈಗ ಶ್ರಮಿಕ ರತ್ನ ಪ್ರಶಸ್ತಿ ಗೌರವ ಲಭಿಸಿದೆ.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ, ಹುಬ್ಬಳ್ಳಿ ತಾಲೂಕು ಘಟಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಹಿರಿಯ ಶಿಕ್ಷಕಿ, ಸಮಾಜ ಸೇವಕಿ ಲೂಸಿ ಸಾಲ್ಡಾನ್ ಅವರ ದತ್ತಿ ದಾನದ ಅಡಿಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಈ ಪ್ರಶಸ್ತಿಯನ್ನು ಅವರೊಳ್ಳಿ ಮುಷ್ಠಿ ಬೀಗದಲ್ಲಿ ವಿವಿಧ ಆವಿಷ್ಕಾರಗಳನ್ನು ಮಾಡಿರುವ ವೀರಭದ್ರ ಕಮ್ಮಾರ ಅವರಿಗೆ ಪ್ರದಾನ ಮಾಡಲಾಯಿತು.

ಧಾರವಾಡ ಶಿಕ್ಷಕರ ಭವನದಲ್ಲಿ ನಡೆದ ಸಮಾರಂಭದಲ್ಲಿ ಧಾರವಾಡ ಡಿಡಿಪಿಐ ಮೋಹನಕುಮಾರ ಹಂಚಾಟೆ, ಧಾರವಾಡ ಜಿಲ್ಲಾ DYPC ಪ್ರಮೋದ ಮಹಾಲೆ, ಕ್ಷೇತ್ರ ಸಮನ್ವಯ ಅಧಿಕಾರಿ ಎನ್,ಎಸ್. ಧಪೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಇತರರು ಪಾಲ್ಗೊಂಡು ಪ್ರಶಸ್ತಿ ವಿತರಿಸಿದರು.

Home add -Advt

Related Articles

Back to top button