Karnataka NewsLatestPolitics
*ರಾಮಮಂದಿರದಂತೆ ನಮ್ಮಲ್ಲಿ ಆಗದಿರಲು ಪ್ರತಿ ದೇವಸ್ಥಾನದಲ್ಲಿ ಸಿಸಿಟಿವಿ ಕಡ್ಡಾಯ: ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಇಡೀ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನದಲ್ಲಿ ಹುಂಡಿ ಎದುರು ಸಿಸಿಟಿವಿ ಅಳವಡಿಕೆ ಮಹತ್ವದ ತೀರ್ಮಾನ ಆಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ವಿಭಾಗ ಮಟ್ಟದ ಶಾಸಕರು, ಅಧಿಕಾರಿಗಳ ಸಭೆ ಬಳಿಕ ಸುವರ್ಣ ಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಮಂದಿರ ಹುಂಡಿ ದುರ್ಬಳಕೆ ವಿಚಾರ ಆಗಿದೆ ಹಾಗಾಗಿ ಅದರಲ್ಲಿ ನಮಗೆ ಮಾನಸಿಕವಾಗಿ ಅವಮಾನ ಆಗಿದೆ. ಧರ್ಮದ ಹೆಸರಿನಲ್ಲಿ ಈ ರೀತಿ ತೊಂದರೆ ಆಗಿದೆ. ನಮ್ಮ ದೇವಸ್ಥಾಬಹಳಲ್ಲಿ ಇ ರೀತಿ ಆಗಬಾರದು ಎಂದು ಇಡೀ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನದಲ್ಲಿ ಹುಂಡಿ ಎದುರು ಸಿಸಿಟಿವಿ ಅಳವಡಿಕೆ ಆಗಲಿದೆ.
ಸಿಸಿಟಿವಿ ಕಲೆಕ್ಷನ್ ಹಣ ತೆಗೆಯವುದು, ಎಣಿಸುವುದು ಎಸ್ಪಿ, ಡಿಸಿ ಅವರ ಕಚೇರಿಗೆ ನೀಡಲಾಗುತ್ತದೆ. ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಇಡಬೇಕು. ಬೀಗ ತೆಗೆಯುವಾಗ ಮುಚ್ಚುವಾಗ ಕ್ಯಾಮರಾ ಆನ್ ಆಗಿರಬೇಕು ಅಂತಾ ಮಾರ್ಗದರ್ಶನ ಕೊಟ್ಟಿದ್ದೇವೆ ಎಂದರು.



