Kannada NewsKarnataka NewsLatest

*ವಾಹನ ಸವಾರರಿಗೆ ಕಾದಿದೆ ಶಾಕ್: ಟೋಲ್ ದರ ಭಾರಿ ಏರಿಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಾಹನ ಸವಾರರಿಗೆ ಬಿಗ್ ಶಾಕ್ ಕಾದಿದೆ. ಏಪ್ರಿಲ್ 1ರಿಂದ ರಾಜ್ಯದಾದ್ಯಂತ ಟೋಲ್ ದರಗಳನ್ನು ಹೆಚ್ಚಳ ಮಾಡಲಾಗುತ್ತಿದೆ.

ಏಪ್ರಿಲ್ 1ರಿಂದ ಟೋಲ್ ದರ ಶೇ 3 ರಿಂದ 5 ರವರೆಗೆ ಹೆಚ್ಚಿಸುವುದು ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಪ್ರತಿವರ್ಷದಂತೆ ಈ ಬಾರಿ ಕೂಡ ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾಗಿ ಟೋಲ್ ದರ ಪರಿಷ್ಕರಣೆ ಮಾಡಲಾಗುತ್ತಿದೆ.

ದರ ಏರಿಕೆಯಾಗುವ ಟೋಲ್ ಗಳು:

ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು–ಮೈಸೂರು ಮಾರ್ಗ)
ಬಾಗೇಪಲ್ಲಿ (ಬೆಂಗಳೂರು–ಹೈದರಾಬಾದ್ ಮಾರ್ಗ)
ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ)
ನಾಂಗ್ಲಿ (ಬೆಂಗಳೂರು–ತಿರುಪತಿ ಮಾರ್ಗ)
ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಟಿಆರ್‌ಆರ್ ಮಾರ್ಗ)

Home add -Advt

ಟೋಲ್ ದರವನ್ನು ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾಗಿ ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ 2.5 ರೂ. ಅಥವಾ ಅದಕ್ಕಿಂತ ಹೆಚ್ಚು ಏರಿಕೆಯಿದ್ದರೆ, ಅದನ್ನು 5 ರೂ.ಗೆ ರೌಂಡ್ ಆಫ್ ಮಾಡಲಾಗುತ್ತದೆ. ಈ ಪರಿಷ್ಕರಣೆ 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿಗಳ ಪ್ರಕಾರ ನಡೆಯುತ್ತಿದ್ದು, ಪ್ರತೀ ಹಣಕಾಸು ವರ್ಷದ ಆರಂಭದಲ್ಲಿ ದರ ಪರಿಷ್ಕರಣೆ ಸಾಮಾನ್ಯವಾಗಿದೆ.


Related Articles

Back to top button